HomeIPL 2026IPL Qualifier 1: ಶೆಫರ್ಡ್‌ನನ್ನು ದಯವಿಟ್ಟು ತಂಡದಿಂದ ಹೊರಹಾಕಿ ಆತನನ್ನು ಕಣಕ್ಕಿಳಿಸಿ; ಫ್ಯಾನ್ಸ್ ಆಸೆಯಂತೆ ಅವನನ್ನು...

IPL Qualifier 1: ಶೆಫರ್ಡ್‌ನನ್ನು ದಯವಿಟ್ಟು ತಂಡದಿಂದ ಹೊರಹಾಕಿ ಆತನನ್ನು ಕಣಕ್ಕಿಳಿಸಿ; ಫ್ಯಾನ್ಸ್ ಆಸೆಯಂತೆ ಅವನನ್ನು ಕರೆತಂದ ಆರ್‌ಸಿಬಿ!

ಇಂದು ( ಮೇ 26 ) ಧರಂಶಾಲಾ ಕ್ರೀಡಾಂಗಣದಲ್ಲಿ ಮಹತ್ವದ ಐಪಿಎಲ್ 2026ರ ಒಂದನೇ ಕ್ವಾಲಿಫಯರ್ ಪಂದ್ಯ ನಡೆಯುತ್ತಿದೆ. ಗ್ರೂಪ್ ಹಂತದ ಅಂಕಪಟ್ಟಿಯಲ್ಲಿ ಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನ ಪಡೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್ ಆರಿಸಿಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.

ಇನ್ನು ಈ ಪಂದ್ಯಕ್ಕೆ ಕಣಕ್ಕಿಳಿದಿರುವ ಆರ್‌ಸಿಬಿ ಆಡುವ ಬಳಗದಲ್ಲಿ ಭಾರೀ ಬದಲಾವಣೆಯನ್ನು ಮಾಡಲಾಗಿದ್ದು, ಆಡುವ ಬಳಗದ ಒಳಗೆ ಜೇಬಕ್ ಡಫಿಯನ್ನು ಕರೆತರಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಆರ್‌ಸಿಬಿ ತನ್ನ ಇಬ್ಬರು ವೇಗಿಗಳಾದ ಜೇಕಬ್ ಡಫಿ ಹಾಗೂ ಜೋಶ್ ಹೇಜಲ್‌ವುಡ್ ಅವರನ್ನು ಕಣಕ್ಕಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್‌ಸಿಬಿ ಕೈಗೊಂಡಿರುವ ಈ ತೀರ್ಮಾನವನ್ನು ಪಂದ್ಯ ಶುರುವಾಗುವುದಕ್ಕೂ ಮುನ್ನ ಅಭಿಮಾನಿಗಳು ಸಲಹೆಯ ರೂಪದಲ್ಲಿ ನೀಡಿದ್ದರು. ರೊಮಾರಿಯೊ ಶೆಫರ್ಡ್‌ರನ್ನು ಹೊರಹಾಕಿ, ಬೇಕಿದ್ದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿ ಡಫಿಯನ್ನು ಕರೆತನ್ನಿ ಎಂದಿದ್ದರು. ಅದರಂತೆ ಆರ್‌ಸಿಬಿ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದು, ತನ್ನ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ಕೀಪರ್), ಟಿಮ್ ಡೇವಿಡ್, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಾಸಿಖ್ ಸಲಾಮ್ ದಾರ್

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular