ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 6 ) ಐಪಿಎಲ್ 2026ರ 12ನೇ ಲೀಗ್ ಪಂದ್ಯ ನಡೆಯುತ್ತಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆರಿಸಿಕೊಂಡರು.
ಆದರೆ ಪಂಜಾಬ್ ಕಿಂಗ್ಸ್ ತಂಡದ ಕ್ಷೇವಿಯರ್ ಬಾರ್ಟ್ಲೆಟ್ ಪಂದ್ಯದ ಎರಡನೇ ಓವರ್‌ನಲ್ಲಿ ಕೊಲ್ಕತ್ತಾದ ಎರಡು ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಕೆಕೆಆರ್‌ಗೆ ಆರಂಭಿಕ ಆಘಾತ ನೀಡಿದರು.
ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಫಿನ್ ಅಲೆನ್ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರೆ, ಬೆನ್ನಲ್ಲೇ ಕಣಕ್ಕಿಳಿದು ಓವರ್‌ನ ಐದನೇ ಎಸೆತಕ್ಕೆ ಬೌಂಡರಿ ಬಾರಿಸಿದ ಕೆಮರಾನ್ ಗ್ರೀನ್ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.
ಸದ್ಯ ಕಣದಲ್ಲಿ ಅಜಿಂಕ್ಯ ರಹಾನೆ 8 ರನ್ ಹಾಗೂ ಅಂಗ್‌ಕ್ರಿಶ್ ರಘುವಂಶಿ ಅಜೇಯ 7 ರನ್ ಗಳಿಸಿ ಕಣದಲ್ಲಿದ್ದು, ಕೆಕೆಆರ್ 3.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದ್ದು, ಈ ಸಮಯಕ್ಕೆ ವರುಣನ ಆಗಮನವಾಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಪಂದ್ಯವೊಂದು ಮಳೆಯ ಸಮಸ್ಯೆಯನ್ನು ಎದುರಿಸಿದೆ. ಅತ್ತ ವೇಗವಾಗಿ ಮೊದಲ ಎರಡು ವಿಕೆಟ್ ಕಳೆದುಕೊಂಡಿರುವ ಕೆಕೆಆರ್ ತುಸು ಕಾಲ ಬ್ರೇಕ್ ಸಿಕ್ಕ ಖುಷಿಯಲ್ಲಿದೆ.

