HomeIPL 2026ಆ ಒಂದೇ ಒಂದು ಓವರ್‌: 3000 ಹೊಂದಿದ್ದ ಫಾಲೋವರ್ಸ್ ಹೊಂದಿದ್ದ ಬೌಲರ್‌ಗೆ 2 ಲಕ್ಷ ಫಾಲೋವರ್ಸ್!

ಆ ಒಂದೇ ಒಂದು ಓವರ್‌: 3000 ಹೊಂದಿದ್ದ ಫಾಲೋವರ್ಸ್ ಹೊಂದಿದ್ದ ಬೌಲರ್‌ಗೆ 2 ಲಕ್ಷ ಫಾಲೋವರ್ಸ್!

ನಿನ್ನೆ ( ಏಪ್ರಿಲ್ 13 ) ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026ರ ಲೀಗ್ ಹಂತದ 21ನೇ ಪಂದ್ಯದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆಯುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲುಣಿಸುವ ಮೂಲಕ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 217 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಜಸ್ಥಾನ್ ರಾಯಲ್ಸ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್ ಆಯಿತು.

ಸನ್ ರೈಸರ್ಸ್ ಪರ ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ ಹಾಗೂ ಕ್ಲಾಸೆನ್ ಆಸರೆಯಾದರೆ, ಬೌಲಿಂಗ್‌ನಲ್ಲಿ ಅದೇ ಮೊದಲ ಬಾರಿಗೆ ಐಪಿಎಲ್‌ ಪಂದ್ಯವನ್ನಾಡಿದ ಪ್ರಫುಲ್ ಹಿಂಗೆ ಹಾಗೂ ಸಕಿಬ್ ಹುಸೈನ್ ತಲಾ ನಾಲ್ಕು ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲೂ ಮೊದಲ ಓವರ್ ಬೌಲಿಂಗ್ ಮಾಡಿದ ಪ್ರಫುಲ್ ಹಿಂಗೆ ಎರಡನೇ ಎಸೆತದಲ್ಲೇ ವೈಭವ್ ಸೂರ್ಯವಂಶಿ ವಿಕೆಟ್ ಪಡೆದು ಅಬ್ಬರಿಸಿ ಬಳಿಕ ಅದೇ ಓವರ್‌ನಲ್ಲಿ ಧ್ರುವ್ ಜುರೆಲ್ ಹಾಗೂ ಲಾನ್‌-ಡ್ರೆ ಪ್ರೆಟೊರಿಯಸ್ ವಿಕೆಟ್‌ಗಳನ್ನೂ ಸಹ ಪಡೆದರು.

ಹೀಗೆ ಮೊದಲ ಓವರ್‌ನಲ್ಲೇ ಮೂರು ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೇ ಬದಲಿಸಿದ ಪ್ರಫುಲ್ ಕನಸಿನಂತಹ ಪದಾರ್ಪಣೆ ಮಾಡಿ ಧೂಳೆಬ್ಬಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಹೀಗೆ ವೈರಲ್ ಆಗುತ್ತಿದ್ದಂತೆ ಪ್ರಫುಲ್ ಇನ್ಸ್ಟಾಗ್ರಾಮ್‌ ಖಾತೆಗೆ ಫಾಲೋವರ್ಸ್ ದಂಡೇ ಹರಿದುಬರುತ್ತಿದೆ. ಈ ಒಂದು ಓವರ್ ಬೌಲಿಂಗ್ ಮಾಡುವ ಮುನ್ನ 3000 ಫಾಲೋವರ್ಸ್ ಹೊಂದಿದ್ದ ಪ್ರಫುಲ್‌ಗೆ ಸದ್ಯ 2 ಲಕ್ಷ ಫಾಲೋವರ್ಸ್‌ ಇದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular