ಮೊನ್ನೆ ( ಏಪ್ರಿಲ್ 25 ) ಶನಿವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಐಪಿಎಲ್ 2026 ಟೂರ್ನಿಯ ಲೀಗ್ ಹಂತದ 35 ಪಂದ್ಯಗಳು ಮುಕ್ತಾಯಗೊಳ್ಳುವ ಮೂಲಕ ಲೀಗ್‌ನ ಅರ್ಧಭಾಗ ಮುಗಿಯಿತು.
ಹೀಗೆ ಟೂರ್ನಿ ಅರ್ಧ ಮುಗಿದ ಸಮಯಕ್ಕೆ ಅಂಕಪಟ್ಟಿಯಲ್ಲಿ ಯಾವ ತಂಡಗಳು ಎಷ್ಟನೇ ಸ್ಥಾನದಲ್ಲಿವೆ ಮತ್ತು ಅದೇ ತಂಡಗಳು ಕಳೆದ ವರ್ಷ ಟೂರ್ನಿ ಅರ್ಧ ಮುಕ್ತಾಯವಾದಾಗ ಎಷ್ಟನೇ ಸ್ಥಾನದಲ್ಲಿವೆ ಎಂಬ ಹೋಲಿಕೆಗಳು ನಡೆದಿದೆ.
ಹಾಗಾದರೆ ಟೂರ್ನಿ ಅರ್ಧ ಮುಕ್ತಾಯವಾದಾಗ ಕಳೆದ ವರ್ಷ ಹೇಗಿತ್ತು ಹಾಗೂ ಈ ವರ್ಷ ಅಂಕಪಟ್ಟಿ ಹೇಗಿದೆ ಎಂಬ ಮಾಹಿತಿ ಮುಂದಿದೆ.
2026ರ ಅಂಕಪಟ್ಟಿ 35 ಪಂದ್ಯಗಳ ಬಳಿಕ
1. ಪಂಜಾಬ್ ಕಿಂಗ್ಸ್ 7 ಪಂದ್ಯಗಳನ್ನಾಡಿ ಆರರಲ್ಲಿ ಗೆದ್ದು ಉಳಿದೊಂದು ಪಂದ್ಯ ರದ್ದಾದ ಕಾರಣ 13 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ
2. ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು ಎರಡರಲ್ಲಿ ಸೋತು 10 ಅಂಕಗಳೊಂದಿಗೆ ಎರಡನೇ ಸ್ಥಾನ.
3. ರಾಜಸ್ಥಾನ್ ರಾಯಲ್ಸ್ 7 ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು ಎರಡರಲ್ಲಿ ಸೋತು 10 ಅಂಕಗಳೊಂದಿಗೆ ಮೂರನೇ ಸ್ಥಾನ.
4. ಸನ್ ರೈಸರ್ಸ್ ಹೈದರಾಬಾದ್ 7 ಪಂದ್ಯಗಳನ್ನಾಡಿ ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಸೋತು 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ.
5. ಚೆನ್ನೈ ಸೂಪರ್ ಕಿಂಗ್ಸ್ 7 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತು 6 ಅಂಕಗಳೊಂದಿಗೆ ಐದನೇ ಸ್ಥಾನ.
6. ಡೆಲ್ಲಿ ಕ್ಯಾಪಿಟಲ್ಸ್ 7 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತು 6 ಅಂಕಗಳೊಂದಿಗೆ ಆರನೇ ಸ್ಥಾನ.
7. ಗುಜರಾತ್ ಟೈಟನ್ಸ್ 7 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತು 6 ಅಂಕಗಳೊಂದಿಗೆ ಏಳನೇ ಸ್ಥಾನ.
8. ಲಕ್ನೋ ಸೂಪರ್ ಜೈಂಟ್ಸ್ 7 ಪಂದ್ಯಗಳನ್ನಾಡಿ ಕೇವಲ ಎರಡು ಪಂದ್ಯಗಳಲ್ಲಿ ಗೆದ್ದು ಐದರಲ್ಲಿ ಸೋತು 4 ಅಂಕಗಳೊಂದಿಗೆ ಎಂಟನೇ ಸ್ಥಾನ.
9. ಮುಂಬೈ ಇಂಡಿಯನ್ಸ್ 7 ಪಂದ್ಯಗಳನ್ನಾಡಿ ಕೇವಲ ಎರಡು ಪಂದ್ಯಗಳಲ್ಲಿ ಗೆದ್ದು ಐದರಲ್ಲಿ ಸೋತು 4 ಅಂಕಗಳೊಂದಿಗೆ ಒಂಬತ್ತನೇ ಸ್ಥಾನ.
10. ಕೊಲ್ಕತ್ತಾ ನೈಟ್ ರೈಡರ್ಸ್ 7 ಪಂದ್ಯಗಳನ್ನಾಡಿ ಕೇವಲ ಒಂದರಲ್ಲಿ ಗೆದ್ದು ಐದು ಪಂದ್ಯಗಳಲ್ಲಿ ಸೋತಿದ್ದು, ಒಂದು ಪಂದ್ಯ ರದ್ದಾದ ಕಾರಣ 3 ಅಂಕಗಳೊಂದಿಗೆ ಕೊನೆಯ ಸ್ಥಾನ.
2025ರ ಅಂಕಪಟ್ಟಿ 35 ಪಂದ್ಯಗಳ ಬಳಿಕ
1. 7 ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು, ಎರಡು ಪಂದ್ಯಗಳಲ್ಲಿ ಸೋತಿದ್ದ ಗುಜರಾತ್ 10 ಅಂಕಗಳೊಂದಿಗೆ ಮೊದಲ ಸ್ಥಾನ.
2. ಡೆಲ್ಲಿ ಕ್ಯಾಪಿಟಲ್ಸ್ 7 ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು, ಎರಡು ಪಂದ್ಯಗಳಲ್ಲಿ ಸೋತು 10 ಅಂಕಗಳೊಂದಿಗೆ ಎರಡನೇ ಸ್ಥಾನ.
3. ಪಂಜಾಬ್ ಕಿಂಗ್ಸ್ 7 ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು, ಎರಡು ಪಂದ್ಯಗಳಲ್ಲಿ ಸೋತು 10 ಅಂಕಗಳೊಂದಿಗೆ ಮೂರನೇ ಸ್ಥಾನ.
4. ಲಕ್ನೋ ಸೂಪರ್ ಜೈಂಟ್ಸ್ 8 ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು, ಎರಡು ಪಂದ್ಯಗಳಲ್ಲಿ ಸೋತು 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ.
5. ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಪಂದ್ಯಗಳನ್ನಾಡಿ ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಸೋತು 8 ಅಂಕಗಳೊಂದಿಗೆ ಐದನೇ ಸ್ಥಾನ.
6. ಕೊಲ್ಕತ್ತಾ ನೈಟ್ ರೈಡರ್ಸ್ 7 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತು 6 ಅಂಕಗಳೊಂದಿಗೆ ಆರನೇ ಸ್ಥಾನ.
7. ಮುಂಬೈ ಇಂಡಿಯನ್ಸ್ 7 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತು 6 ಅಂಕಗಳೊಂದಿಗೆ ಏಳನೇ ಸ್ಥಾನ.
8. ರಾಜಸ್ಥಾನ್ ರಾಯಲ್ಸ್ 8 ಪಂದ್ಯಗಳನ್ನಾಡಿ ಎರಡರಲ್ಲಿ ಗೆದ್ದು ಆರರಲ್ಲಿ ಸೋತು 4 ಅಂಕಗಳೊಂದಿಗೆ ಎಂಟನೇ ಸ್ಥಾನ.
9. ಸನ್ ರೈಸರ್ಸ್ ಹೈದರಾಬಾದ್ 7 ಪಂದ್ಯಗಳನ್ನಾಡಿ ಎರಡರಲ್ಲಿ ಗೆದ್ದು ಐದರಲ್ಲಿ ಸೋತು 4 ಅಂಕಗಳೊಂದಿಗೆ ಒಂಬತ್ತನೇ ಸ್ಥಾನ.
10. ಚೆನ್ನೈ ಸೂಪರ್ ಕಿಂಗ್ಸ್ 7 ಪಂದ್ಯಗಳನ್ನಾಡಿ ಎರಡರಲ್ಲಿ ಗೆದ್ದು ಐದರಲ್ಲಿ ಸೋತು 4 ಅಂಕಗಳೊಂದಿಗೆ ಹತ್ತನೇ ಸ್ಥಾನ.

