HomeLatest NewsIPL 2026: ತ್ರಿಮೂರ್ತಿಗಳ ಅರ್ಧಶತಕ; ಸನ್‌ರೈಸರ್ಸ್ ಹೈದರಾಬಾದ್‌ಗೆ ಸೋಲುಣಿಸಿದ ಪಂಜಾಬ್

IPL 2026: ತ್ರಿಮೂರ್ತಿಗಳ ಅರ್ಧಶತಕ; ಸನ್‌ರೈಸರ್ಸ್ ಹೈದರಾಬಾದ್‌ಗೆ ಸೋಲುಣಿಸಿದ ಪಂಜಾಬ್

ಮುಲ್ಲಾನ್‌ಪುರದಲ್ಲಿ ಇಂದು ( ಏಪ್ರಿಲ್ 11 ) ಐಪಿಎಲ್ 2026ರ 17ನೇ ಲೀಗ್ ಪಂದ್ಯ ನಡೆಯುತ್ತಿದ್ದು, ಪಂಜಾಬ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. .

ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆರಿಸಿಕೊಂಡು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 220 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 223 ರನ್ ಕಲೆಹಾಕಿತು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ ಪವರ್‌ಪ್ಲೇನಲ್ಲೇ ಶತಕದ ಜತೆಯಾಟವನ್ನಾಡಿ ಉತ್ತಮ ಆರಂಭ ಕಟ್ಟಿಕೊಟ್ಟರು. ಟ್ರಾವಿಸ್ ಹೆಡ್ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 38 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 74 ರನ್ ಬಾರಿಸಿದರು. ಈ ಇಬ್ಬರ ವಿಕೆಟ್ ಬಳಿಕ ಕಣಕ್ಕಿಳಿದ ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ ಹಾಗೂ ಅನಿಕೇತ್ ವರ್ಮಾ ಸಮಾಧಾನಕರ ಆಟವಾಡಿದರಾದರೂ ಆರಂಭಿಕರು ಕಟ್ಟಿಕೊಟ್ಟ ಇನ್ನಿಂಗ್ಸ್‌ನ ರನ್ ವೇಗವನ್ನು ಹೆಚ್ಚಿಸುವಲ್ಲಿ ಅಷ್ಟೇನೂ ಯಶಸ್ವಿಯಾಗಲಿಲ್ಲ. ಇಶಾನ್ ಕಿಶನ್ 27 (17), ಹೆನ್ರಿಚ್ ಕ್ಲಾಸೆನ್ 39 (33) ಹಾಗೂ ಅನಿಕೇತ್ ವರ್ಮಾ 18 (9) ರನ್ ಕಲೆಹಾಕಿದರು. ಇನ್ನುಳಿದಂತೆ ಸಲೀಲ್ ಅರೊರಾ 9, ಹರ್ಷ್ ದುಬೆ ಅಜೇಯ 1 ರನ್ ಹಾಗೂ ಯಾವುದೇ ರನ್ ಗಳಿಸದ ನಿತಿಶ್ ಕುಮಾರ್ ರೆಡ್ಡಿ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಂಜಾಬ್ ಕಿಂಗ್ಸ್ ಪರ ಉತ್ತಮ ಬೌಲಿಂಗ್ ಮಾಡಿ ಸನ್‌ ರೈಸರ್ಸ್ ಆರಂಭಿಕರನ್ನು ಕಟ್ಟಿಹಾಕಿದ ಶಶಾಂಕ್ ಸಿಂಗ್ ಎರಡು ವಿಕೆಟ್, ದುಬಾರಿಯಾದ ಅರ್ಷ್‌ದೀಪ್ ಸಿಂಗ್ ಎರಡು ವಿಕೆಟ್ ಹಾಗೂ ಕ್ಷೇವಿಯರ್ ಬಾರ್ಟ್‌ಲೆಟ್ ಒಂದು ವಿಕೆಟ್ ಪಡೆದರು.

ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಿಯಾನ್ಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ 99 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಉತ್ತಮ ಆರಂಭ ಮಾಡಿಕೊಟ್ಟರು. ಪ್ರಿಯನ್ಶ್ ಆರ್ಯ 20 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 57 ರನ್ ಬಾರಿಸಿದರೆ, ಪ್ರಭ್‌ಸಿಮ್ರಾನ್ ಸಿಂಗ್ 25 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 51 ರನ್ ಬಾರಿಸಿದರು. ನಂತರ ಕೂಪರ್ ಕೊಲೊನಿ 11 ರನ್, ನೆಹಲ್ ವಧೇರ 14 ರನ್ ಗಳಿಸಿ ಔಟ್ ಆದರೆ, ಮತ್ತೊಂದೆಡೆ ನೆಲಕಚ್ಚಿ ನಿಂತ ನಾಯಕ ಶ್ರೇಯಸ್ ಐಯ್ಯರ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 69 ರನ್ ಬಾರಿಸಿದರು. ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 9 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದ ಶಶಾಂಕ್ ಸಿಂಗ್ ಅಜೇಯರಾಗಿ ಉಳಿದರು.

ಸನ್ ರೈಸರ್ಸ್ ಹೈದರಾಬಾದ್ ಪರ ಶಿವಾಂಗ್ ಕುಮಾರ್ ಮೂರು ವಿಕೆಟ್ ಹಾಗೂ ಹರ್ಷ್ ದುಬೆ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular