HomeIPL 2026IPL 2026: ಐಪಿಎಲ್‌ನಲ್ಲಿ ಹೆಚ್ಚು ಬಾರಿ ಫೈನಲ್ ಆಡಿದ ತಂಡಗಳ ಪಟ್ಟಿ; ಆರ್‌ಸಿಬಿಯದ್ದು 5ನೇ ಫೈನಲ್,...

IPL 2026: ಐಪಿಎಲ್‌ನಲ್ಲಿ ಹೆಚ್ಚು ಬಾರಿ ಫೈನಲ್ ಆಡಿದ ತಂಡಗಳ ಪಟ್ಟಿ; ಆರ್‌ಸಿಬಿಯದ್ದು 5ನೇ ಫೈನಲ್, 10 ಬಾರಿ ಫೈನಲ್ ಆಡಿದ ಮಹಾ ತಂಡವಿದು!

ನಾಳೆ ( ಮೇ 31 ) ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಕ್ವಾಲಿಫಯರ್ ಒಂದನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳೇ ಈ ಪಂದ್ಯದಲ್ಲಿಯೂ ಮುಖಾಮುಖಿಯಾಗುತ್ತಿದ್ದು, ತಲಾ ಒಂದು ಬಾರಿ ಕಪ್ ಗೆದ್ದಿರುವ ಉಭಯ ತಂಡಗಳ ಪೈಕಿ ಯಾವ ತಂಡ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲಿದೆ ಎಂಬ ಪ್ರಶ್ನೆ ಎದ್ದಿದೆ.

ಇನ್ನು ಆರ್‌ಸಿಬಿಗೆ ಇದು ಐದನೇ ಫೈನಲ್ ಆಗಿದ್ದು, ಗುಜರಾತ್ ಟೈಟನ್ಸ್ ತಂಡಕ್ಕೆ ಮೂರನೇ ಫೈನಲ್ ಆಗಿದೆ. ಆರ್‌ಸಿಬಿ ಮೂರು ಬಾರಿ ಫೈನಲ್ ಸೋತಿದ್ದು, ಗುಜರಾತ್ ಟೈಟನ್ಸ್ ಒಂದು ಬಾರಿ ಸೋತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗಿದ್ದರೆ ಐಪಿಎಲ್ ಇತಿಹಾಸದಲ್ಲಿ ಯಾವ ತಂಡ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದೆ ಹಾಗೂ ಆ ಪೈಕಿ ಎಷ್ಟರಲ್ಲಿ ಸೋತು ಎಷ್ಟರಲ್ಲಿ ಗೆದ್ದಿದೆ ಎಂಬ ಮಾಹಿತಿ ಮುಂದಿದೆ.

ಚೆನ್ನೈ ಸೂಪರ್ ಕಿಂಗ್ಸ್: ಈ ತಂಡ 10 ಬಾರಿ ಫೈನಲ್ ಪ್ರವೇಶ ಮಾಡುವ ಮೂಲಕ ಐಪಿಎಲ್‌ನಲ್ಲಿ ತನ್ನ ಪಾರುಪತ್ಯ ಮೆರೆದಿದೆ. ಮೊದಲ ಆವೃತ್ತಿಯಲ್ಲಿಯೇ ಫೈನಲ್ ತಲುಪಿದ್ದ ಸಿಎಸ್‌ಕೆ 10 ಬಾರಿ ಫೈನಲ್ ತಲುಪಿ ಐದು ಬಾರಿ ಚಾಷಂಪಿಯನ್ ಆಗಿ, ಉಳಿದ ಐದು ಬಾರಿ ರನ್ನರ್ ಅಪ್ ಆಗಿದೆ.

ಮುಂಬೈ ಇಂಡಿಯನ್ಸ್: ಈ ತಂಡ ಒಟ್ಟು 6 ಬಾರಿ ಫೈನಲ್ ತಲುಪಿದ್ದು, ಫೈನಲ್‌ನಲ್ಲಿ ಅತಿಹೆಚ್ಚು ಸಕ್ಸಸ್ ರೇಟ್ ಹೊಂದಿರುವ ತಂಡವಾಗಿದೆ. ಆಡಿರುವ ಆರು ಫೈನಲ್ ಪಂದ್ಯಗಳ ಪೈಕಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಕೇವಲ ಒಂದು ಬಾರಿ ರನ್ನರ್ ಅಪ್ ಎನಿಸಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಐಪಿಎಲ್ ಆರಂಭವಾದಾಗಿನಿಂದ ಟ್ರೋಫಿ ಇಲ್ಲದ ಕಾರಣಕ್ಕೆ ಅತಿಹೆಚ್ಚು ಟ್ರೋಲ್‌ಗೀಡಾದ ತಂಡವೆಂದರೆ ಅದು ಆರ್‌ಸಿಬಿ. ಕಳೆದ ಆವೃತ್ತಿಯಲ್ಲಿ ನಾಲ್ಕನೇ ಬಾರಿಗೆ ಫೈನಲ್ ಪಂದ್ಯವನ್ನಾಡಿದ ರಾಯಲ್ ಚಾಲೆಂಜರ್ಸ್ ಅದೇ ಮೊದಲ ಬಾರಿಗೆ ಕಪ್ ಗೆದ್ದಿತು. ಇನ್ನು ಈ ಬಾರಿ ಐದನೇ ಫೈನಲ್ ಆಡಲಿರುವ ಆರ್‌ಸಿಬಿ ಕಪ್ ಗೆಲ್ಲಲಿದೆಯಾ ಅಥವಾ ನಾಲ್ಕನೇ ಬಾರಿಗೆ ಸೋಲು ಕಾಣಲಿದೆಯಾ ಎಂಬ ಪ್ರಶ್ನೆ ಮೂಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಒಟ್ಟು 4 ಬಾರಿ ಫೈನಲ್ ಪಂದ್ಯಗಳನ್ನಾಡಿದ್ದು, ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ ಹಾಗೂ ಕೇವಲ ಒಂದು ಬಾರಿ ರನ್ನರ್ ಅಪ್ ಎನಿಸಿಕೊಂಡು ಫೈನಲ್‌ನಲ್ಲಿ ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.

ಸನ್ ರೈಸರ್ಸ್ ಹೈದರಾಬಾದ್: ಈ ತಂಡ ಒಟ್ಟು 3 ಬಾರಿ ಫೈನಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಎರಡು ಬಾರಿ ರನ್ನರ್ ಅಪ್ ಆಗಿ ಒಂದು ಬಾರಿ ಮಾತ್ರ ಚಾಂಪಿಯನ್ ಎನಿಸಿಕೊಂಡಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular