ನಿನ್ನೆ ( ಮೇ 31 ) ಅಹ್ಮದಾಬಾದ್ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ಗಳ ಗೆಲುವನ್ನು ದಾಖಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದು ಸತತ ಎರಡು ಟ್ರೋಫಿ ಗೆದ್ದ ಮೂರನೇ ತಂಡ ಎಂಬ ದಾಖಲೆ ಬರೆಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಟೈಟನ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.
ಈ ಗೆಲುವಿನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ತೆರೆಬಿದ್ದಿದ್ದು, ಆರ್ಸಿಬಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡರೆ, ಗುಜರಾತ್ ಟೈಟನ್ಸ್ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಹೀಗೆ ಚಾಂಪಿಯನ್ ಆದ ಆರ್ಸಿಬಿಗೆ ಟ್ರೋಫಿ ವಿತರಿಸಲಾಗಿದ್ದು, ಉಳಿದ ತಂಡಗಳು ಹಾಗೂ ವಿವಿಧ ವಿಭಾಗಗಳ ಅಡಿಯಲ್ಲಿ ಆಟಗಾರರಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅವುಗಳ ಕುರಿತ ಮಾಹಿತಿ ಮುಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು – 20 ಕೋಟಿ ರೂ
ರನ್ನರ್ ಅಪ್ ಗುಜರಾತ್ ಟೈಟನ್ಸ್ – 13 ಕೋಟಿ
ರಾಜಸ್ಥಾನ್ ರಾಯಲ್ಸ್ 7 ಕೋಟಿ
ಸನ್ ರೈಸರ್ಸ್ ಹೈದರಾಬಾದ್ 6.5 ಕೋಟಿ
ಫೈನಲ್ ಪಂದ್ಯಶ್ರೇಷ್ಠ ( ವಿರಾಟ್ ಕೊಹ್ಲಿ ) – 5 ಲಕ್ಷ
ಆರೆಂಜ್ ಕ್ಯಾಪ್ ( ವೈಭವ್ ಸೂರ್ಯವಂಶಿ ) – 10 ಲಕ್ಷ
ಪರ್ಪಲ್ ಕ್ಯಾಪ್ ( ಕಗಿಸೊ ರಬಾಡಾ ) – 10 ಲಕ್ಷ
ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ ( ವೈಭವ್ ಸೂರ್ಯವಂಶಿ ) – 10 ಲಕ್ಷ
ಎಮರ್ಜಿಂಗ್ ಪ್ಲೇಯರ್ ಆಫ್ ದ ಸೀಸನ್ ( ವೈಭವ್ ಸೂರ್ಯವಂಶಿ ) – 10 ಲಕ್ಷ
ಸೂಪರ್ ಸಿಕ್ಸಸ್ ( ವೈಭವ್ ಸೂರ್ಯವಂಶಿ ) – 10 ಲಕ್ಷ
ಸೂಪರ್ ಸ್ಟ್ರೈಕರ್ ( ವೈಭವ್ ಸೂರ್ಯವಂಶಿ ) – 10 ಲಕ್ಷ
ಸೀಸನ್ನ ಬೆಸ್ಟ್ ಕ್ಯಾಚ್ ( ಮನೀಶ್ ಪಾಂಡೆ ) – 10 ಲಕ್ಷ
ಅತಿಹೆಚ್ಚು ಡಾಟ್ ಬಾಲ್ಸ್ – ಮೊಹಮ್ಮದ್ ಸಿರಾಜ್
ಫೇರ್ಪ್ಲೇ ಅವಾರ್ಡ್ – ಪಂಜಾಬ್ ಕಿಂಗ್ಸ್
ಅತ್ಯುತ್ತಮ ಕ್ರೀಡಾಂಗಣ – ಈಡನ್ ಗಾರ್ಡನ್ಸ್, ಕೊಲ್ಕತ್ತಾ

