HomeIPL 2026IPL 2026: ನಡೆದೇಹೋಯ್ತು ಟೂರ್ನಿಯ ಮೊದಲ ಸೂಪರ್‌ಓವರ್; ಲಕ್ನೋಗೆ ಮಣ್ಣುಮುಕ್ಕಿಸಿದ ನರೈನ್

IPL 2026: ನಡೆದೇಹೋಯ್ತು ಟೂರ್ನಿಯ ಮೊದಲ ಸೂಪರ್‌ಓವರ್; ಲಕ್ನೋಗೆ ಮಣ್ಣುಮುಕ್ಕಿಸಿದ ನರೈನ್

ನಿನ್ನೆ ( ಏಪ್ರಿಲ್ 26 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 38ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 156 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಮುಂದಾದ ಲಕ್ನೋ ಸೂಪರ್ ಜೈಂಟ್ಸ್ ಸಹ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿತು.

ಈ ಮೂಲಕ ಡ್ರಾ ಆದ ಪಂದ್ಯ ಟೂರ್ನಿಯ ಮೊದಲ ಸೂಪರ್ ಓವರ್‌ಗೆ ದಾರಿ ಮಾಡಿಕೊಟ್ಟಿತು. ಕೆಕೆಆರ್ ಪರ ಸುನಿಲ್ ನರೈನ್ ಸೂಪರ್ ಓವರ್ ಮಾಡಿದರು. ಮೊದಲ ಎಸೆತದಲ್ಲೇ ನಿಕೋಲಸ್ ಪೂರನ್ ಕ್ಲೀನ್ ಬೌಲ್ಡ್ ಆದರೆ, ಎರಡನೇ ಎಸೆತದಲ್ಲಿ ಪಂತ್ ಸಿಂಗಲ್ ತೆಗೆದುಕೊಂಡರು. ಬೆನ್ನಲ್ಲೇ ಏಡನ್ ಮಾರ್ಕ್ರಮ್ ದೊಡ್ಡ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿದರು. ಅಲ್ಲಿಗೆ ಕೇವಲ 1 ರನ್ ಕಲೆಹಾಕಿದ ಲಕ್ನೋ ಕೆಕೆಆರ್‌ಗೆ 2 ರನ್‌ಗಳ ಗುರಿ ನೀಡಿತು. ಲಕ್ನೋ ಪರ ಪ್ರಿನ್ಸ್ ಯಾದವ್ ಸೂಪರ್ ಓವರ್ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲೇ ರಿಂಕು ಸಿಂಗ್ ಚೆಂಡನ್ನು ಬೌಂಡರಿಗಟ್ಟಿ ತಂಡಕ್ಕೆ ಜಯ ತಂದಿಟ್ಟರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular