HomeIPL 2026ಆರ್‌ಸಿಬಿ ಟಾಪ್‌ ಆರ್ಡರ್ ಬೇಗ ಔಟ್ ಆಗ್ಲಿ ಆಗ ನಾನು ಆಡಬಹುದು ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ...

ಆರ್‌ಸಿಬಿ ಟಾಪ್‌ ಆರ್ಡರ್ ಬೇಗ ಔಟ್ ಆಗ್ಲಿ ಆಗ ನಾನು ಆಡಬಹುದು ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದ ಜಿತೇಶ್ ಠುಸ್; ಈ ಶೋಕಿ ಬೇಕಾ ಎಂದ ನೆಟ್ಟಿಗರು!

ನಿನ್ನೆ ( ಮೇ 7 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 9 ರನ್‌ಗಳ ರೋಚಕ ಗೆಲುವನ್ನು ಕಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮಳೆಯಿಂದಾಗಿ ಎರಡು ಬಾರಿ ನಿಂತು ನಡೆದ ಪಂದ್ಯದಲ್ಲಿ ಒಂದು ಓವರ್ ಕಡಿತಗೊಂಡು 19 ಓವರ್‌ಗಳ ಪಂದ್ಯ ನಡೆದಿದ್ದು, ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆರ್‌ಸಿಬಿಗೆ 213 ರನ್‌ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.

ಆರ್‌ಸಿಬಿ ಕೇವಲ 9 ರನ್‌ಗೆ ಬೆಥೆಲ್ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಮೂರನೇ ವಿಕೆಟ್‌ಗೆ ಜತೆಯಾದ ಪಡಿಕ್ಕಲ್ ಹಾಗೂ ನಾಯಕ ರಜತ್ ಪಟಿದಾರ್ ಜೋಡಿ 53 ಎಸೆತಗಳಲ್ಲಿ 95 ರನ್‌ಗಳ ಜತೆಯಾಟವನ್ನಾಡುವ ಮೂಲಕ ಆಸರೆಯಾಯಿತು. ಪಡಿಕ್ಕಲ್ 34 ರನ್ ಗಳಿಸಿದ್ದಾಗ ಔಟ್ ಆದರು. ಈ ಸಮಯದಲ್ಲಿ ಕಣಕ್ಕಿಳಿದ ಜಿತೇಶ್ ಶರ್ಮಾ 3 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಅನಗತ್ಯ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಜಿತೇಶ್ ಶರ್ಮಾ ಮತ್ತೊಮ್ಮೆ ವಿಫಲರಾಗಿದ್ದು, ಟೂರ್ನಿ ಆರಂಭದಲ್ಲಿ ತಾನು ಹೇಳಿದ್ದ ಅತಿರೇಕದ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ. ಹೌದು, ತಂಡದ ಟಾಪ್ ಆರ್ಡರ್ ಬೇಗ ಬೀಳಲಿ ಆಗ ನಾನು ಬ್ಯಾಟಿಂಗ್ ಮಾಡಿ ರನ್ ಗಳಿಸಬಹುದು ಎಂದು ದೇವರಲ್ಲಿ ಯಾವಾಗಲೂ ಬೇಡಿಕೊಳ್ಳುತ್ತೇನೆ ಎಂದಿದ್ದರು.

ಅತಿಯಾದ ವಿಶ್ವಾಸದಲ್ಲಿ ಈ ಹೇಳಿಕೆ ನೀಡಿದ್ದ ಜಿತೇಶ್ ಶರ್ಮಾ ಟೂರ್ನಿಯಲ್ಲಿ ಆಡಿರುವ 8 ಇನ್ನಿಂಗ್ಸ್‌ನಲ್ಲಿ ಗಳಿಸಿರುವುದು ಕೇವಲ 64 ರನ್ ಮಾತ್ರ. 23 ರನ್ ಈ ಬಾರಿ ಈತ ಗಳಿಸಿರುವ ಅಧಿಕ ರನ್ ಆಗಿದೆ. ಹೀಗೆ ಸಾಲು ಸಾಲು ಪಂದ್ಯಗಳಲ್ಲಿ ಮಣ್ಣು ಮುಕ್ಕಿರುವ ಜಿತೇಶ್ ಶರ್ಮಾಗೆ ತನ್ನ ಹಳೆಯ ಹೇಳಿಕೆಯನ್ನು ನೆನಪಿಸಿ ನೆಟ್ಟಿಗರು ಈ ಶೋಕಿ ಎಲ್ಲ ಬೇಕಾ, ಸಿಕ್ಕ ಅವಕಾಶದಲ್ಲಿ ಚೆನ್ನಾಗಿ
ಆಡುವುದನ್ನು ಬಿಟ್ಟು ಟ್ರೋಲ್‌ಗೀಡಾಗಿದ್ದೀರ ಎಂದು ಕಾಲೆಳೆದಿದ್ದಾರೆ.

ಜಿತೇಶ್ ಶರ್ಮಾ 8 ಇನ್ನಿಂಗ್ಸ್ ರನ್: 0(1), 5(8), 10(9), 23(9), 14(20), 10(6), 1(3) ಹಾಗೂ 1(3)

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular