HomeLatest NewsIPL 2026: ಪ್ಲೇಆಫ್‌ ಸನಿಹದಲ್ಲಿ ಆರ್‌ಸಿಬಿಗೆ ಭಾರೀ ಹಿನ್ನಡೆ; ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದ ಸ್ಟಾರ್...

IPL 2026: ಪ್ಲೇಆಫ್‌ ಸನಿಹದಲ್ಲಿ ಆರ್‌ಸಿಬಿಗೆ ಭಾರೀ ಹಿನ್ನಡೆ; ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದ ಸ್ಟಾರ್ ಆಟಗಾರ!

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿವೆ. ಕಳೆದ ಬಾರಿ ಅದೇ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಹಾಲಿ ಚಾಂಪಿಯನ್ಸ್ ಈ ಬಾರಿಯೂ ಸಹ ಟ್ರೋಫಿ ಎತ್ತಿಹಿಡಿಯುವತ್ತ ಚಿತ್ತ ನೆಟ್ಟು ಸದ್ಯ ಪ್ಲೇಆಫ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದೆ.

ಟೂರ್ನಿಯಲ್ಲಿ ಆಡಿದ ಒಟ್ಟು 14 ಲೀಗ್ ಹಂತದ ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಗೆದ್ದು 18 ಅಂಕಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಅಂಕಪಟ್ಟಿಯಲ್ಲಿ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಅಗ್ರಸ್ಥಾನದಲ್ಲಿದ್ದು, ಕ್ವಾಲಿಫಯರ್ ಒಂದನೇ ಪಂದ್ಯವನ್ನಾಡಲು ಅರ್ಹತೆ ಗಿಟ್ಟಿಸಿಕೊಂಡಿದೆ.

ಹೀಗೆ ಯಶಸ್ವಿಯಾಗಿ ಮುಂದಿನ ಹಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾಲಿಟ್ಟಿರುವ ಸಂದರ್ಭದಲ್ಲೇ ಭಾರೀ ಹಿನ್ನಡೆ ಅನುಭವಿಸಿದ್ದು, ತಂಡದ ಆರಂಭಿಕ ಆಟಗಾರ ಜೇಕಬ್ ಬೆಥೆಲ್ ಗಾಯದ ಸಮಸ್ಯೆಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಕ್ಯಾಚ್ ಹಿಡಿಯಲು ಮುಂದಾಗಿದ್ದ ಜೇಕಬ್ ಬೆಥೆಲ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಅದೇ ಕಾರಣಕ್ಕೆ ಸನ್ ರೈಸರ್ಸ್ ವಿರುದ್ಧದ ಪಂದ್ಯಕ್ಕೂ ಸಹ ಅಲಭ್ಯರಾಗಿದ್ದರು. ಸದ್ಯ ತಂಡ ತ್ಯಜಿಸಿರುವ ಬೆಥೆಲ್ ಕುರಿತು ಆರ್‌ಸಿಬಿ ಅಧಿಕೃತವಾಗಿ ಪೋಸ್ಟ್ ಹಾಕಿದ್ದು, ಮುಂದಿನ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮರಳುವ ಸಾಧ್ಯತೆ ಇದೆ ಎಂದು ತಿಳಿಸಿದೆ ಹಾಗೂ ಶೀಘ್ರದಲ್ಲೇ ಗುಣಮುಖರಾಗುವಂತೆ ಆಶಿಸಿದೆ.

ಇನ್ನು ಬೆಥೆಲ್ ಅಲಭ್ಯತೆ ತಂಡದ ಮೇಲೆ ಅಷ್ಟೇನೂ ಪರಿಣಾಮ ಬೀರಲ್ಲ ಎಂದೇ ಹೇಳಬಹುದು. ಏಕೆಂದರೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೆಥೆಲ್ ಬದಲಾಗಿ ಇನ್ನಿಂಗ್ಸ್ ಆರಂಭಿಸಿದ್ದ ವೆಂಕಟೇಶ್ ಐಯ್ಯರ್ ಚೆನ್ನಾಗಿಯೇ ಆಟವನ್ನಾಡಿದ್ದರು.

https://x.com/RCBTweets/status/2058194723316371561?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular