ಚುಟುಕು ಕ್ರಿಕೆಟ್ ಸಮರ ಐಪಿಎಲ್ 2026ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ತಿಂಗಳ 28ರಂದು ಮೊದಲ ಪಂದ್ಯ ನಡೆಯಲಿದೆ ಎಂದು ಹಲವು ವರದಿಗಳು ತಿಳಿಸಿದ್ದವು.
ಅದರಂತೆ ಇದೀಗ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ಐಪಿಎಲ್ ವೇಳಾಪಟ್ಟಿ ಕುರಿತು ವರದಿಯೊಂದನ್ನು ಪ್ರಕಟ ಮಾಡಿದ್ದು, ಮೊದಲ ಹಂತದ ಅಂದರೆ ಲೀಗ್ ಹಂತದ 20 ಪಂದ್ಯಗಳ ಕುರಿತ ಮಾಹಿತಿಯನ್ನು ನೀಡಿದೆ.
ಈ ಹಿಂದೆ ಬಂದಿದ್ದ ವರದಿ ಪ್ರಕಾರ ಟೂರ್ನಿಯ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ ಎನ್ನಲಾಗಿತ್ತು. ಆದರೆ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವರದಿ ಮಾಡಿದೆ.
ಮೊದಲ 20 ಪಂದ್ಯಗಳು ಯಾವ ತಂಡಗಳ ನಡುವೆ, ಯಾವಾಗ, ಎಲ್ಲಿ ನಡೆಯಲಿವೆ ಎಂಬ ಮಾಹಿತಿ ಮುಂದಿದೆ.
- 28/03/26 ಶನಿವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ – ಬೆಂಗಳೂರು
- 29/03/26 ಭಾನುವಾರ – ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಮುಂಬೈ
- 30/03/26 ಸೋಮವಾರ – ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಗುವಾಹಟಿ
- 31/03/26 ಮಂಗಳವಾರ,- ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಲ್ಲನ್ಪುರ
- 01/04/26 ಬುಧವಾರ – ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಲಕ್ನೋ
- 02/04/26 ಗುರುವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ – ಕೋಲ್ಕತ್ತಾ
- 03/04/26 ಶುಕ್ರವಾರ – ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ – ಚೆನ್ನೈ
- 04/04/26 ಶನಿವಾರ – ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ – ದೆಹಲಿ
- 04/04/26 ಶನಿವಾರ – ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
- 05/04/26 ಭಾನುವಾರ – ಸನ್ ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ – ಹೈದರಾಬಾದ್
- 05/04/26 ಭಾನುವಾರ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
- 06/04/26 ಸೋಮವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ – ಕೋಲ್ಕತ್ತಾ
13. 07/04/26 ಮಂಗಳವಾರ – ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ – ಗುವಾಹಟಿ
- 08/04/26 ಬುಧವಾರ – ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ – ದೆಹಲಿ
- 09/04/26 ಗುರುವಾರ – ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಕೋಲ್ಕತ್ತಾ
- 10/04/26 ಶುಕ್ರವಾರ – ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಗುವಾಹಟಿ
- 11/04/26 ಶನಿವಾರ – ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ – ಮುಲ್ಲನ್ಪುರ
- 11/04/26 ಶನಿವಾರ – ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಚೆನ್ನೈ
- 12/04/26 ಭಾನುವಾರ – ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್ – ಲಕ್ನೋ
- 12/04/26 ಭಾನುವಾರ – ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮುಂಬೈ

