HomeLatest NewsIPL 2026: ಇಂಪ್ಯಾಕ್ಟ್ ಪ್ಲೇಯರ್ ಹೆಸರಲ್ಲಿ ಬೇಕಾದ ಬ್ಯಾಟ್ಸ್‌ಮನ್, ಬೌಲರ್ ಆರಿಸಿಕೊಂಡರೆ ನಾವು ಯಾಕೆ ಬೇಕು?...

IPL 2026: ಇಂಪ್ಯಾಕ್ಟ್ ಪ್ಲೇಯರ್ ಹೆಸರಲ್ಲಿ ಬೇಕಾದ ಬ್ಯಾಟ್ಸ್‌ಮನ್, ಬೌಲರ್ ಆರಿಸಿಕೊಂಡರೆ ನಾವು ಯಾಕೆ ಬೇಕು? ಅಕ್ಷರ್ ಪಟೇಲ್ ಕಿಡಿ

ಶನಿವಾರ ( ಮಾರ್ಚ್ 28 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಈ ಮೂಲಕ ಬಹು ನಿರೀಕ್ಷಿತ ಐಪಿಎಲ್‌ನ ಮತ್ತೊಂದು ಆವೃತ್ತಿ ಆರಂಭವಾಗಲಿದ್ದು, ಸದ್ಯ ಎಲ್ಲ ಫ್ರಾಂಚೈಸಿಗಳು ಟೂರ್ನಿಗೆ ಬೇಕಾದ ಸಿದ್ಧತೆ ನಡೆಸಿಕೊಳ್ಳುವಲ್ಲಿ ನಿರತವಾಗಿವೆ.

ಇನ್ನು ಐಪಿಎಲ್‌ನಲ್ಲಿ ಭಾರೀ ಟೀಕೆಗೆ ಒಳಗಾದ ನಿಯಮವೆಂದರೆ ಅದು ಇಂಪ್ಯಾಕ್ಟ್ ಪ್ಲೇಯರ್. ಅದು ಈ ಬಾರಿಯೂ ಸಹ ಮುಂದುವರಿಯುತ್ತಿದ್ದು, ಅಭಿಮಾನಿಗಳಿಂದ ಹಾಗೂ ಕೆಲ ಆಟಗಾರರಿಂದ ಟೀಕೆಗೆ ಒಳಗಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಾಸ್ ಸಂದರ್ಭದಲ್ಲಿ ಪ್ರಕಟಿಸುವ ಆಡುವ ಬಳಗದಲ್ಲಿ ಅಗತ್ಯಕ್ಕೆ ತಕ್ಕ ಹಾಗೆ ಬ್ಯಾಟರ್ ಹಾಗೂ ಬೌಲರ್ ಬದಲಾವಣೆ ಮಾಡುವುದು ಯಾವ ಸೀಮೆಯ ಕ್ರೀಡಾಸ್ಪೂರ್ತಿ ಎಂದು ಅನೇಕ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದರೆ, ಇತ್ತೀಚೆಗಷ್ಟೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಕಿಡಿಕಾರಿದರು.

‘ನಾನು ಓರ್ವ ಆಲ್‌ರೌಂಡರ್ ಆದ ಕಾರಣ ನನಗೆ ಈ ನಿಯಮ ಇಷ್ಟವಿಲ್ಲ. ಈ ಹಿಂದೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ಗಾಗಿ ಆಲ್‌ರೌಂಡರ್ ಆಯ್ಕೆ ಮಾಡುತ್ತಿದ್ದರು. ಆದರೆ ಈ ನಿಯಮದಿಂದಾಗಿ ಟೀಮ್ ಮ್ಯಾನೇಜ್‌ಮೆಂಟ್ ಬೇಕಾದ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳನ್ನು ಬಳಸಿಕೊಳ್ಳುತ್ತಿದೆ. ಹೀಗಿರುವಾಗ ಆಲ್‌ರೌಂಡರ್‌ಗಳು ಏಕೆ ಬೇಕು?’ ಎಂದು ಅಕ್ಷರ್ ಪಟೇಲ್ ಪ್ರಶ್ನಿಸಿದ್ದಾರೆ.

ಅಲ್ಲದೇ ಏನೇ ಆದರೂ ನಿಯಮ ನಿಯಮವೇ ಅದನ್ನು ನಾವು ಪಾಲಿಸಲೇಬೇಕು, ನನ್ನ ವೈಯಕ್ತಿಕ ದೃಷ್ಟಿಯಿಂದ ನನಗೆ ಈ ನಿಯಮ ಇಷ್ಟವಿಲ್ಲ ಎಂದು ಅಕ್ಷರ್ ಪಟೇಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular