HomeIPL 2026ಶಾಸಕರು ಮಾತ್ರವಲ್ಲ ಕೆಎಸ್‌ಸಿಎ ಸದಸ್ಯರಿಗೂ ಟಿಕೆಟ್ ಕೊಡಬೇಕಂತೆ, ಹಾಗಾದ್ರೆ ಫ್ಯಾನ್ಸ್‌ಗೆ ಟಿಕೆಟ್ ಇರಲ್ಲ, ಅದೇ ಕಾರಣಕ್ಕೆ...

ಶಾಸಕರು ಮಾತ್ರವಲ್ಲ ಕೆಎಸ್‌ಸಿಎ ಸದಸ್ಯರಿಗೂ ಟಿಕೆಟ್ ಕೊಡಬೇಕಂತೆ, ಹಾಗಾದ್ರೆ ಫ್ಯಾನ್ಸ್‌ಗೆ ಟಿಕೆಟ್ ಇರಲ್ಲ, ಅದೇ ಕಾರಣಕ್ಕೆ ಬೆಂಗಳೂರಿನಲ್ಲಿ ಫೈನಲ್ ಇಲ್ಲ ಎಂದ ಐಪಿಎಲ್ ಅಧ್ಯಕ್ಷ!

ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ರೋಚಕ ಹಂತ ತಲುಪಿದ್ದು, ಟಾಪ್ 4 ಸ್ಥಾನಗಳನ್ನು ಪಡೆದು ಪ್ಲೇಆಫ್ ಪ್ರವೇಶ ಪಡೆದುಕೊಳ್ಳಲು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಹೀಗಿರುವಾಗಲೇ ಬಿಸಿಸಿಐ ಪ್ಲೇಆಫ್ ಸುತ್ತಿನ ಪಂದ್ಯಗಳು ನಡೆಯುವ ತಾಣಗಳ ಮಾಹಿತಿಯನ್ನು ಹಂಚಿಕೊಂಡಿತು. ಮೊದಲ ಕ್ವಾಲಿಫಯರ್ ಪಂದ್ಯ ಧರ್ಮಶಾಲಾದಲ್ಲಿ ಹಾಗೂ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫಯರ್ ನ್ಯೂ ಚಂಡೀಗಢದಲ್ಲಿ ಹಾಗೂ ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಘೋಷಿಸಿತು.

ಈ ಸುದ್ದಿ ಕೇಳಿ ಪ್ಲೇಆಫ್ ಪಂದ್ಯ ಹಾಗೂ ಮುಖ್ಯವಾಗಿ ಫೈನಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂತಸದಿಂದ ಕಾಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ಮೂಲಗಳು ಶಾಸಕರು ಟಿಕೆಟ್‌ಗಳಿಗಾಗಿ ಹೆಚ್ಚಿನ ಬೇಡಿಕೆ ಇಟ್ಟಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದು ವರದಿ ಮಾಡಿದವು. ಆದರೆ ರಾಜಕಾರಣಿಗಳು ಇದನ್ನು ತಳ್ಳಿಹಾಕಿದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಗುಜರಾತ್‌ನಲ್ಲಿ ಫೈನಲ್ ನಡೆಸುವ ಸಲುವಾಗಿ ರಾಜಕೀಯ ನಡೆದಿದೆ ಎಂದು ಕಾಮೆಂಟ್ ಮಾಡಿ ಆಕ್ರೋಶ ಹೊರಹಾಕಿದರು. ಆದರೆ ಬಿಸಿಸಿಐ ಆಗಲಿ ಅಥವಾ ಐಪಿಎಲ್ ಅಧ್ಯಕ್ಷರಾಗಲಿ ಎಲ್ಲಿಯೂ ಐಪಿಎಲ್ ಫೈನಲ್ ಪಂದ್ಯದ ಸ್ಥಳಾಂತರಕ್ಕೆ ಕಾರಣವೇನೆಂಬುದನ್ನು ತಿಳಿಸಿರಲಿಲ್ಲ.

ಆದರೆ ಇಂದು ( ಮೇ 7 ) ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಈ ಕುರಿತು ಮೌನ ಮುರಿದಿದ್ದಾರೆ. ‘ನೋಡಿ ಐಪಿಎಲ್ ಫೈನಲ್ ಮೊದಲಿಗೆ ಬೆಂಗಳೂರಿನಲ್ಲೇ ನಡೆಸುವ ಯೋಜನೆ ಇತ್ತು. ಕೆಎಸ್‌ಸಿಎ ಜತೆ ಪರಿಶೀಲಿಸಿದೆವು. ಏಕೆಂದರೆ ಕಳೆದ ವರ್ಷ ನಡೆದ ಕಾಲ್ತುಳಿತದಿಂದ ಅವರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಅವರ ಎಂಎಲ್‌ಎಗಳಿಗೆ ಉಚಿತ ಟಿಕೆಟ್ ಕೊಡಬೇಕು, ಜತೆಗೆ ಕೆಎಸ್‌ಸಿಎ ಸಹ ಅದರ ಸದಸ್ಯರಿಗೆ ಟಿಕೆಟ್‌ ನೀಡಬೇಕಿದೆ. ಕ್ರೀಡಾಂಗಣ ಅಷ್ಟು ದೊಡ್ಡದಾಗಿಲ್ಲ. ಲೀಗ್ ಪಂದ್ಯಗಳಿಗೂ ಸಹ ಸ್ವಲ್ಪ ಟಿಕೆಟ್‌ಗಳು ಲಭ್ಯವಿದ್ದವು. ಐಪಿಎಲ್ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವ ಕಾರಣ ಅವರಿಗೆ ಟಿಕೆಟ್ ನೀಡಬೇಕಿದೆ. ನಾವು ಐಸಿಸಿ ಜತೆ ಸಹ ಸಭೆ ನಡೆಸಿದ್ದು, ಸಾಕಷ್ಟು ಮಂದಿ ಐಪಿಎಲ್ ವೀಕ್ಷಣೆಗೆ ಬರುತ್ತಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ದೊಡ್ಡ ಕ್ರೀಡಾಂಗಣದ ಅಗತ್ಯವಿದೆ ಎಂದು ನಾವು ಅಹ್ಮದಾಬಾದ್ ಆಯ್ಕೆ ಮಾಡಿದೆವು’ ಎಂದು ಅರುಣ್ ಧುಮಾಲ್ ಪಿಟಿಐಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular