ವೀರ ಪರಿವಾರ ಸಹಾಯತಾ ಯೋಜನೆ-25 ಯನ್ನು ಎಲ್ಲಾ ರಾಜ್ಯಗಳಲ್ಲಿ ಪ್ರಾರಂಭಿಸಲಾಗಿ ಯೋಜನೆಯ ಸುಗಮ ಅನುಷ್ಠಾನಕ್ಕೆ ಸಂಬAಧಿಸಿ ಕ್ರಿಯಾತ್ಮಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು, ಮಾಜಿ ಸೈನಿಕರಿಗೆ ವಿಶೇಷವಾಗಿ ನ್ಯಾಯಾಧೀಶ ಅಡ್ವೊಕೇಟ್ ಜನರಲ್(ಜೆ.ಎ.ಜಿ) ಇಲಾಖೆಯಿಂದ ಆನ್ ಲೈನ್ ಮಧ್ಯಸ್ಥಿಕೆ ತರಬೇತಿ ನೀಡಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಕಾನೂನು ನೆರವುಗಳು, ಪ್ರಕ್ರಿಯೆಗಳು, ಅಫಿಡವಿಟ್ಗಳನ್ನು ತಯಾರಿಸುವಲ್ಲಿ ಮತ್ತು ವಿಚಾರಣೆಗೆ ಹಾಜರಾಗಲು ದಾವೆದಾರರಿಗೆ ಸಹಾಯವಾಗುತ್ತವೆ.
ಈ ಯೋಜನೆಯಲ್ಲಿ, ಪ್ಯಾರಾ-ಲೀಗಲ್-ಸ್ವಯಂಸೇವಕರಾಗಿ ಕೆಲಸ ಮಡಲು ಇಚ್ಚೆಯುಳ್ಳ (ಉಚಿತವಾಗಿ) ಸೇವೆಯನ್ನು ಸಲ್ಲಿಸುವ ಕುರಿತು ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ದೂರವಾಣಿ ಸಂಖ್ಯೆಗೆ 08172250465 ಕರೆ ಮಾಡಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.