ವಧುವಿನ ದುಬಾರಿ ಲೆಹಂಗಾವನ್ನೇ ಡೇರೆ ಮಾಡ್ಕೊಂಡ ಪುಟಾಣಿ: ಕ್ಯೂಟ್ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

ಯಾವುದೇ ಮದುವೆಗೆ ಹೋಗಿ, ಅಲ್ಲಿ ಸೂಟು-ಬೂಟು ಹಾಕ್ಕೊಂಡಿದ್ದ ನವ ವರ ಹಾಗೂ ಆತನ ಪಕ್ಕ ಅದ್ಧೂರಿ ಲೆಹಂಗಾ ಹಾಕಿ ನಿಂತಿರೋ ವಧು ಎಲ್ಲರ ಗಮನ ಸೆಳೆದಿರುತ್ತಾರೆ. ಅದರಲ್ಲೂ ಎಷ್ಟೋ ಜನರಿಗೆ, ನವವಧು ಹಾಕ್ಕೊಂಡಿದ್ದ ಲೆಹಂಗಾ ಮೇಲೆಯೇ ಕಣ್ಣೀರುತ್ತೆ. ಅಂತಹ ಅದ್ದೂರಿ ಲೆಹಂಗಾಗೆ ಆಕೆ ಲಕ್ಷ ಲಕ್ಷ ಖರ್ಚು ಮಾಡಿರ್ತಾಳೆ, ಆದರೆ ಮದುವೆ ನಂತರ ಅಷ್ಟು ಬೆಲೆ ಬಾಳುವ ಲೆಹಂಗಾನ್ನ ಅಷ್ಟೇ ಜೋಪಾನವಾಗಿ ಇಟ್ಟು ಬಿಟ್ಟಿತಾ೯ರೆ.

ಆದರೆ ಇತ್ತೀಚೆಗೆ ವಧುವಿನ ಲೆಹಂಗಾದಿಂದ ಆಗೋ ಪ್ರಯೋಜನ ಏನೇನು ಅನ್ನೋದರ ಕುರಿತು ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಪುಟ್ಟ-ಪುಟ್ಟ ಮಕ್ಕಳು ಇದೇ ಲೆಹಂಗಾವನ್ನ ಡೇರೆ (tent) ಮಾಡ್ಕೊಂಡು ಅದರೊಳಗೆ ಕುಳಿತು ಆಟ ಆಡುತ್ತಿದ್ದಾರೆ. ಈ ಕ್ಯೂಟ್ ಆಗಿರುವ ವಿಡಿಯೋವನ್ನ ಶಿವಾಂಗಿಯವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಈ ವಿಡಿಯೋವನ್ನ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಶಿವಾಂಗಿಯವರ ಲೆಹಂಗಾನ್ನ ಡೇರೆಯಂತೆ ಹಾಕ್ಕೊಂಡು ಆಟ ಆಡ್ತಿರೋರು, ಆಕೆಯ ಸೋದರಳಿಯರಾಗಿದ್ದಾರೆ. ಈ ವಿಡಿಯೋ ಕ್ಯಾಪ್ಷನ್‌ನಲ್ಲಿ ‘ವಧುವಿನ ಲೆಹಂಗಾ ಇವರಿಗೆ ಆಟ ಆಡುವ ಡೇರೆಯಾಗಿದೆ. ಐ ಮಿಸ್ ಮೈ 2 ಮುಂಚ್‌ಕಿನ್ಸ್ ….. ನೋಡಿ ಎಂದು ಹೇಗೆ ಎಲ್ಲರ ಬಾಯಿ ಮುಚ್ಚಿಸಿದ್ದಾರೆ”ಎಂದು ಶಿವಾಂಗಿಯವರು ಬರೆದಿದ್ದಾರೆ.

ನೆಟ್ಟಿಗರು ಈ ವಿಡಿಯೋಗೆ ಫಿದಾ ಆಗೋಗಿದ್ದಾರೆ. ಒಬ್ಬರು ಈ ಲೆಹಂಗಾದ ಉಪಯೋಗ ಇವರಿಬ್ಬರಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಇನ್ನೊಬ್ಬರು ಇದು ವೈರಲ್ ಆಗಿರೋ ಕ್ಯೂಟೆಸ್ಟ್ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಭಾವನೆಯನ್ನು ವ್ಯಕ್ತ ಪಡಿಸಿದ್ದಾರೆ.

https://youtu.be/12yAfO_CfQA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read