HomeKarnataka1-10 ನೇ ತರಗತಿ ಶಾಲಾ ಮಕ್ಕಳ ಎತ್ತರ, ತೂಕ ಅಳತೆ ಮಾಡಿ ದಾಖಲೆ ಸಲ್ಲಿಸಲು ಸೂಚನೆ

1-10 ನೇ ತರಗತಿ ಶಾಲಾ ಮಕ್ಕಳ ಎತ್ತರ, ತೂಕ ಅಳತೆ ಮಾಡಿ ದಾಖಲೆ ಸಲ್ಲಿಸಲು ಸೂಚನೆ

ಬೆಂಗಳೂರು: 2024-25 ನೇ ಸಾಲಿನಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಅಡಿ ತರಗತಿವಾರು ಪ್ರತಿ ಮಗುವಿನ ಎತ್ತರ(Height) ಮತ್ತು ತೂಕ(Weight) ಅಳತೆ ಮಾಡಿ ವಿವರವನ್ನು ಶಾಲಾ ಹಂತದಲ್ಲಿ ಸರಿಯಾಗಿ ದಾಖಲೆಸಿ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಪಿಎಂ ಪೋಷಣ್ ನಿರ್ದೇಶಕರು ತಿಳಿಸಿದ್ದಾರೆ.

ಶಾಲೆಗಳು ಪ್ರಾರಂಭವಾಗಿ ಜುಲೈ ಮೊದಲನೇ ವಾರದಲ್ಲಿ ಎಲ್ಲಾ 1-10 ನೇ ತರಗತಿಗಳ ಮಕ್ಕಳ ಎತ್ತರ(Height) ಮತ್ತು ತೂಕ(Weight) ಅಳತೆಯನ್ನು ಶಾಲೆಯ ದೈಹಿಕ ಶಿಕ್ಷಕ ಶಿಕ್ಷಕರು ಅಥವಾ ತರಗತಿ ಶಿಕ್ಷಕರ ಸಹಾಯದಿಂದ ಮಾಡಿಸಿ ದಾಖಲಿಸುವ ಕ್ರಮ ವಹಿಸಲು ಸೂಚಿಸಲಾಗಿದೆ.

ಅದೇ ರೀತಿ ಫೆಬ್ರವರಿ-2025 ಮಾಹೆಯೊಳಗಾಗಿ ಮತ್ತೊಮ್ಮೆ ಎಲ್ಲಾ ಶಾಲೆಗಳಲ್ಲಿ 1-10 ನೇ ತರಗತಿಗಳ ಮಕ್ಕಳ ಎತ್ತರ ಮತ್ತು ತೂಕ ಅಳತೆಯೆನ್ನು ದಾಖಲಿಸಲು ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದರಿ ದಾಖಲೆಗಳ ಶಾಲಾವಾರು ಮಾಹಿತಿಯನ್ನು ತಾಲೂಕು ದೈಹಿಕ-ಆರೋಗ್ಯ ಶಿಕ್ಷಣ ಅಧಿಕಾರಿಗಳು(TPO) ಸಂಗ್ರಹಿಸಿ, ಕ್ರೂಢೀಕರಿಸಿ, ದೃಢೀಕರಿಸಿ, ತಾಲೂಕು ಪಂಚಾಯತ್‌ ಪಿ.ಎಂ.ಪೋಷಣ್, ಸಹಾಯಕ ನಿರ್ದೇಶಕರಿಗೆ ತಪ್ಪದೇ ಸಲ್ಲಿಸುವುದು. ಸಹಾಯಕ ನಿರ್ದೇಶಕರು ತಾಲೂಕು ಹಂತದ ವರದಿಯನ್ನು ದೃಢೀಕರಣದೊಂದಿಗೆ ಜಿಲ್ಲಾ ಪಂಚಾಯತ್‌ ಹಂತಕ್ಕೆ ಸಲ್ಲಿಸುವುದು. ಜಿಲ್ಲಾ ಪಂಚಾಯತ್ ಪಿಎಂಪೋಷಣ್ ಆಧಿಕಾರಿಗಳು ತಾಲ್ಲೂಕುವಾರು ಸಲ್ಲಿಸಿರುವ ಮಾಹಿತಿಯನ್ನು ಕ್ರೋಢಿಕರಿಸಿ ರಾಜ್ಯ ಪಿಎಂ ಪೋಷಣ್ ನಿರ್ದೇಶಕರ ಕಚೇರಿಗೆ ಜು. 31 ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular