HomeHealthಇಂಗಿನಲ್ಲಿದೆ ಈ ಆರೋಗ್ಯ ಸಮಸ್ಯೆ ದೂರ ಮಾಡುವ ಶಕ್ತಿ

ಇಂಗಿನಲ್ಲಿದೆ ಈ ಆರೋಗ್ಯ ಸಮಸ್ಯೆ ದೂರ ಮಾಡುವ ಶಕ್ತಿ

ಇಂಗು ಹಲವು ಆರೋಗ್ಯದ ಸಮಸ್ಯೆಗಳನ್ನು ದೂರಮಾಡುವ ಶಕ್ತಿ ಹೊಂದಿರುವ ಅಪರೂಪದ ವಸ್ತು. ಬೇಳೆಗಳನ್ನು ಬಳಸಿ ಮಾಡುವ ಆಹಾರಗಳಿಗೆ ಇಂಗನ್ನು ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡದು.

ಹೊಟ್ಟೆಯುಬ್ಬರಿಸಿ ಬಂದು ವಿಪರೀತ ನೋಯುತ್ತಿದ್ದರೆ ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಉಪ್ಪು ಮತ್ತು ಇಂಗು ಹಾಕಿ ಕರಗಿಸಿ ಕುಡಿಯಿರಿ. ಅರ್ಧ ಗಂಟೆಯೊಳಗೆ ಹೊಟ್ಟೆ ನೋವಿನ ಸಮಸ್ಯೆ ದೂರವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಗಿಗೆ ರಕ್ತದೊತ್ತಡದ ಮಟ್ಟವನ್ನು ಮತ್ತು ರಕ್ತದ ಹರಿವನ್ನು ಸುಧಾರಿಸುವ ಗುಣವಿದ್ದು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ತಿಂಗಳ ರಜೆಯ ವೇಳೆ ಉಂಟಾಗುವ ಹೊಟ್ಟೆ ನೋವಿನ ನಿವಾರಣೆಗೆ ಮೆಂತೆ ಪುಡಿಗೆ ಚಿಟಿಕೆ ಉಪ್ಪು, ಇಂಗು ಮತ್ತು ಮಜ್ಜಿಗೆ ಸೇರಿಸಿ ಕುಡಿಯಿರಿ.

ಇಂಗನ್ನು ನೀರಿನಲ್ಲಿ ಕುದಿಸಿ ಕುಡಿದರೆ ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕಿಡ್ನಿಯನ್ನು ಸ್ವಚ್ಛಗೊಳಿಸಿ ಮೂತ್ರ ಸಂಬಂಧಿ ಸೋಂಕುಗಳನ್ನು ದೂರಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular