HomeLatest Newsನಾನು ಬಿಕಿನಿ ಹಾಕಿದ್ದೀನಿ ಅಂತೀರಲ್ಲ, ಸುಂಟರಗಾಳಿ ಹಾಡಿನಲ್ಲಿ ನೀವೇನು ಬುರ್ಖಾ ಹಾಕಿದ್ರಾ?: ನಟಿ ರಕ್ಷಿತಾಗೆ ಮಹಿಳೆ...

ನಾನು ಬಿಕಿನಿ ಹಾಕಿದ್ದೀನಿ ಅಂತೀರಲ್ಲ, ಸುಂಟರಗಾಳಿ ಹಾಡಿನಲ್ಲಿ ನೀವೇನು ಬುರ್ಖಾ ಹಾಕಿದ್ರಾ?: ನಟಿ ರಕ್ಷಿತಾಗೆ ಮಹಿಳೆ ಕೌಂಟರ್; ವಿಡಿಯೊ

ಕೆಡಿ ದಿ ಡೆವಿಲ್ ಚಿತ್ರತಂಡ ಬಿಡುಗಡೆ ಮಾಡಿದ್ದ ಚಿತ್ರದ ಎರಡನೇ ಹಾಡು ಸರ್ಸೆ ನಿನ್ನ ಸೆರಗು ಸರ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ಹೀನಾಯ ಟ್ರೋಲ್ ಹಾಗೂ ಟೀಕೆಗಳು ಎದುರಾದ ಬೆನ್ನಲ್ಲೇ ನ್ಯಾಯಾಲಯ ಸಹ ಹಾಡಿನ ಕುರಿತು ಸೆನ್ಸಾರ್ ಬೋರ್ಡ್ ಗಮನಹರಿಸಬೇಕು ಎಂದು ಸೂಚನೆ ನೀಡಿದೆ.

ಇತ್ತ ತಪ್ಪಿನ ಅರಿವಾದ ಪ್ರೇಮ್ ಪ್ರೇಕ್ಷಕರ ಕ್ಷಮೆಯಾಚಿಸಿ ಹೊಸ ಹಾಡು ಬರೆಯುವುದಾಗಿ ಹೇಳಿಕೊಂಡಿದ್ದಾರೆ. ಹೆಣ್ಣಿನ ಅಂಗಗಳ ಬಗ್ಗೆ ಕೇವಲವಾಗಿ ಸಾಹಿತ್ಯ ಬರೆಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಹಲವಾರು ಸೋಷಿಯಲ್ ಮೀಡಿಯಾ ಇನ್ಫ್ಲುಯನ್ಸರ್ಸ್ ಈ ಹಾಡಿನ ವಿರುದ್ಧ ದನಿ ಎತ್ತಿದ್ದು, ಮಹಿಳೆಯೊಬ್ಬರೂ ಸಹ ಹಾಡಿನ ವಿರುದ್ಧ ವಿಡಿಯೊ ಮಾಡಿ ಕಿಡಿಕಾರಿದ್ದರು.

ರಕ್ಷಿತಾ ಪ್ರೇಮ್ ಸಹ ಟ್ರೋಲ್‌ಗಳ ವಿರುದ್ಧ ಮಾತನಾಡಿದ್ದರು. ಬೇರೆ ಭಾಷೆಗಳಲ್ಲಿ ಹಾಡು ಬಂದಾಗ ಮನರಂಜನೆ ತೆಗೆದುಕೊಳ್ಳುತ್ತೀರ ಇವಾಗ ತಪ್ಪು ಎನ್ನುತ್ತೀರ ಎಂದಿದ್ದರು. ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ರಕ್ಷಿತಾ ಅವರ ಹೇಳಿಕೆಗಳು ತನಗೆ ಹೇಳಿರುವ ಮಾತುಗಳು ಎಂದು ಆರೋಪ ಮಾಡಿ ಮಹಿಳೆಯೊಬ್ಬರು ಅದಕ್ಕೆ ಪ್ರತ್ಯುತ್ತರದ ವಿಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೊದಲ್ಲಿ ರಕ್ಷಿತಾ ಪ್ರೇಮ್‌ಗೆ ಸಾಲು ಸಾಲು ಕೌಂಟರ್ ಕೊಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುಷ್ಪ ಚಿತ್ರದ ಪೀಲಿಂಗ್ಸ್ ಹಾಗೂ ಹು ಅಂಟಾವ ಮಾವ ಹಾಡುಗಳನ್ನು ಉಲ್ಲೇಖಿಸಿರುವ ರಕ್ಷಿತಾ ಪ್ರೇಮ್ ಅವರೇ ಪೀಲಿಂಗ್ಸ್ ಹಾಡು ದಂಪತಿ ನಡುವಿನ ಸಾಹಿತ್ಯ ಹಾಗೂ ಹು ಅಂಟಾವ ಹಾಡಿನಲ್ಲಿ ಮಹಿಳೆ ಯಾವುದೇ ಬಟ್ಟೆ ಹಾಕಿದರೂ ಗಂಡಸರ ಬುದ್ದಿ ಒಂದೇ ಎಂದು ಬರೆದಿದ್ದಾರೆ ಹಾಗೆ ಮಹಿಳೆ, ಆದರೆ ನಿಮ್ಮ ಗಂಡ ಬರೆದಿರುವ ಹಾಡಿನಲ್ಲಿ ಮಹಿಳೆಯ ಗುಪ್ತಾಂಗದ ಬಗ್ಗೆ ಬರೆದಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ನಂತರ ಕನ್ನಡ ಚಿತ್ರರಂಗವನ್ನು ಭೋಜ್‌ಪುರಿಗೆ ಹೋಲಿಕೆ ಮಾಡಿದ್ದೀರ, ಅವರು ಮಾಡ್ತಾರೆ ನಾವ್ಯಾಕೆ ಮಾಡಬಾರದು ಎಂದಿದ್ದೀರ. ನಿಮ್ಮ ನಿರ್ಮಾಪಕರಿಗೆ ಗೊತ್ತಿದೆಯಾ ಇದು ಅವರು ನೋಡಿದರೆ ಪ್ಯಾನ್ ಇಂಡಿಯಾ ಮಾಡಬೇಕು ಅಂತಾ ಇದ್ದಾರೆ, ನೀವು ನೋಡಿದ್ರೆ ಬಿ ಗ್ರೇಡ್‌ ಸಿನಿಮಾಗೆ ಹೋಲಿಕೆ ಮಾಡಿಕೊಳ್ತಾ ಇದ್ದೀರ. ಭೋಜ್‌ಪುರಿಯಲ್ಲಿ ರಾಜ್‌ಕುಮಾರ್, ಶಂಕರ್‌ನಾಗ್ ಇವರೆಲ್ಲ ಇರಲಿಲ್ಲ. ಯಾರು ನಿಮಗೆ ಅಧಿಕಾರ ಕೊಟ್ಟಿದ್ದು? ಕನ್ನಡ ಚಿತ್ರರಂಗವನ್ನು ಭೋಜ್‌ಪುರಿ ಮಟ್ಟಕ್ಕೆ ತೆಗೆದುಕೊಂಡು ಹೋಗುವುದೇ ನಿಮ್ಮ ಪ್ಲಾನಾ? ಎಂದು ಪ್ರಶ್ನೆ ಹಾಕಿದ್ದಾರೆ.

ಇನ್ನು ನನಗೆ ಹೇಳಿದ್ದಾರೆ ಎಂದು ಮಾತು ಮುಂದುವರಿಸಿದ ಮಹಿಳೆ ಕನ್ನಡ ಇಷ್ಟಪಡುವವರು ಇಲ್ಲೇ ಇರಬೇಕು, ಫಾರಿನರ್‌ನನ್ನು ಏಕೆ ಮದುವೆಯಾಗಬೇಕು ಎಂದಿದ್ದಾರೆ, ನೀವು ಆಗಿರುವುದು ಅಂತರ್ಜಾತಿ ವಿವಾಹ, ನಾನು ಆಗಿರುವುದು ಅಂತಾರಾಷ್ಟ್ರೀಯ ವಿವಾಹ. ಹಾಗಾದರೆ ಹಲವಾರು ನಟಿಯರು ವಿದೇಶಿಗರನ್ನು ಮದುವೆಯಾಗಿದ್ದಾರೆ ಅವರನ್ನೂ ಪ್ರಶ್ನೆ ಮಾಡ್ತೀರಾ? ಎಂದಿದ್ದಾರೆ. ಅಲ್ಲದೇ ವಿದೇಶದಲ್ಲಿ ನೆಲೆಸಿರುವ ನನ್ನ ಅಭಿಪ್ರಾಯ ಬೇಡ ಎಂದರೆ ನಮ್ಮಂತಹ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ನಂಬಿ ಚಿತ್ರ ಬಿಡುಗಡೆ ಮಾಡಬೇಡಿ ಎಂದು ತಿವಿದಿದ್ದಾರೆ.

ಅಲ್ಲದೇ ಇಂಟರ್‌ನೆಟ್ ಫೇಮ್‌ಗಾಗಿ ವಿಡಿಯೊ ಮಾಡುತ್ತಾರೆ ಎನ್ನುವ ನೀವು ಚಿತ್ರವನ್ನು ಏನು ದಾನ ಧರ್ಮಕ್ಕೆ ಮಾಡುತ್ತಾ ಇದ್ದೀರ? ಎಂದು ಪ್ರಶ್ನಿಸಿದ್ದಾರೆ. ಫೇಮ್ ಹಾಗೂ ಹಣಕ್ಕಾಗಿ ಹೆಣ್ಣಿನ ಬಗ್ಗೆ ಕೆಟ್ಟದಾಗಿ ಹಾಡು ಬರೆಯುವ ತಾವು ನನ್ನ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದಿದ್ದಾರೆ.

ಇನ್ನು ನಾನು ಬಿಕಿನಿಯಲ್ಲಿ ಫೋಟೊ ಹಾಕಿರುವ ಬಗ್ಗೆ ಮಾತನಾಡಿದ್ದಾರೆ. ನಾನು ಇರುವುದು ಬೀಚ್ ಹತ್ತಿರ ಬಿಕಿನಿಯಲ್ಲಿ ಫೋಟೊ ಹಾಕಿದ್ದೀನಿ. ನೀವು ಸುಂಟರಗಾಳಿ, ಕೊಡೆ ಕೊಡೆ ಕೊಬ್ರಿ ಮಿಟಾಯಿ ಹಾಡಿನಲ್ಲಿ ಬುರ್ಖಾ ಹಾಕಿಕೊಂಡು ಡಾನ್ಸ್ ಮಾಡಿದ್ದೀರಾ? ಎಂದು ಕೌಂಟರ್ ಕೊಟ್ಟಿದ್ದಾರೆ.

https://twitter.com/i/status/2034183372034216028

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular