HomeIndiaBREAKING : ಮಧ್ಯಪ್ರದೇಶದಲ್ಲಿ ಬೆಳ್ಳಂ ಬೆಳಗ್ಗೆ ಹಳಿ ತಪ್ಪಿದ ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲು |VIDEO

BREAKING : ಮಧ್ಯಪ್ರದೇಶದಲ್ಲಿ ಬೆಳ್ಳಂ ಬೆಳಗ್ಗೆ ಹಳಿ ತಪ್ಪಿದ ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲು |VIDEO

ಇಂದೋರ್: ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳು ಮಧ್ಯಪ್ರದೇಶದ ಜಬಲ್ಪುರದಲ್ಲಿ ಶನಿವಾರ ಬೆಳಿಗ್ಗೆ 5:50 ಕ್ಕೆ ಹಳಿ ತಪ್ಪಿವೆ.ಇಂದೋರ್ ನಿಂದ ತೆರಳುತ್ತಿದ್ದ ರೈಲು ಜಬಲ್ಪುರ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 6 ಅನ್ನು ಸಮೀಪಿಸುತ್ತಿದ್ದಾಗ ಹಳಿ ತಪ್ಪಿದೆ.

ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಶ್ಚಿಮ ಮಧ್ಯ ರೈಲ್ವೆಯ ಸಿಪಿಆರ್ಒ ಹರ್ಷಿತ್ ಶ್ರೀವಾಸ್ತವ ಮಾತನಾಡಿ, “ರೈಲು ಇಂದೋರ್ನಿಂದ ಬರುತ್ತಿತ್ತು. ಜಬಲ್ಪುರ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 6 ರ ಕಡೆಗೆ ಹೋಗುತ್ತಿದ್ದಾಗ, ರೈಲು ನಿಧಾನವಾಗಿ ಚಲಿಸುತ್ತಿತ್ತು ಮತ್ತು 2 ಬೋಗಿಗಳು ಹಳಿ ತಪ್ಪಿದವು.

ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮುಂಜಾನೆ ೫.೫೦ ರ ಸುಮಾರಿಗೆ ಈ ಘಟನೆ ನಡೆದಿದೆ. ಇದು ಪ್ಲಾಟ್ ಫಾರ್ಮ್ ನಿಂದ ಸುಮಾರು 150 ಮೀಟರ್ ದೂರದಲ್ಲಿ ಹಳಿ ತಪ್ಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular