ಭಾರತ-ಪಾಕ್ ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 250 ಬಿರಿಯಾನಿ ಆರ್ಡರ್

ನವದೆಹಲಿ: ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಸ್ವಿಗ್ಗಿ ಪ್ರತಿ ನಿಷಕ್ಕೆ 250 ಬಿರಿಯಾನಿ ಆರ್ಡರ್ ಗಳನ್ನು ಸ್ವೀಕರಿಸಿದೆ.

ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಲಕ್ಷಾಂತರ ಜನರು ಶನಿವಾರ ತಮ್ಮ ಟಿವಿ ಸೆಟ್‌ಗಳಿಗೆ ಅಂಟಿಕೊಂಡಿದ್ದರಿಂದ ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಶನಿವಾರ ಪ್ರತಿ ನಿಮಿಷಕ್ಕೆ 250 ಕ್ಕೂ ಹೆಚ್ಚು ಬಿರಿಯಾನಿಗಳಿಗೆ ಆರ್ಡರ್‌ಗಳನ್ನು ಸ್ವೀಕರಿಸಿದೆ.

ಪಂದ್ಯ ಆರಂಭವಾದಾಗಿನಿಂದ ಪ್ರತಿ ನಿಮಿಷಕ್ಕೆ 250 ಬಿರಿಯಾನಿಗಳನ್ನು ಆರ್ಡರ್ ಮಾಡಿರುವುದನ್ನು ಸ್ವಿಗ್ಗಿ ನೋಡಿದೆ.

ಚಂಡೀಗಢದ ಒಂದು ಮನೆಯವರು ಒಂದೇ ಬಾರಿಗೆ 70 ಬಿರಿಯಾನಿಗಳನ್ನು ಆರ್ಡರ್ ಮಾಡಿದರು. ಹೆಚ್ಚುವರಿಯಾಗಿ, ಪಂದ್ಯದ ವೇಳೆ ಭಾರತೀಯರು 1 ಲಕ್ಷಕ್ಕೂ ಹೆಚ್ಚು ತಂಪು ಪಾನೀಯಗಳನ್ನು ಆರ್ಡರ್ ಮಾಡಿದ್ದಾರೆ.

10,916 ಮತ್ತು 8,504 ಯುನಿಟ್‌ಗಳ ಬ್ಲೂ ಲೇಸ್(ಚಿಪ್ಸ್) ಮತ್ತು ಗ್ರೀನ್ ಲೇಸ್‌ಗಳನ್ನು ಆರ್ಡರ್ ಮಾಡಲಾಗಿದೆ. ಸಹಜವಾಗಿಯೇ ಇಲ್ಲಿಯೂ ನೀಲಿ ಬಣ್ಣ ಗೆಲ್ಲುತ್ತಿದೆ ಎಂದು ಸ್ವಿಗ್ಗಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read