ನವದೆಹಲಿ: 9 ಭಯೋತ್ಪಾದಕ ಕೇಂದ್ರಗಳ ಮೇಲಿನ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಐಸಿ 814 ಹೈಜಾಕ್ ಮತ್ತು ಪುಲ್ವಾಮಾ ಸ್ಫೋಟದಲ್ಲಿ ಭಾಗಿಯಾಗಿದ್ದ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ಅವರಂತಹ ಭಯೋತ್ಪಾಕರು ಸೇರಿದ್ದಾರೆ ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವಾಯುನೆಲೆಗಳು ಪುನರಾವರ್ತಿತ ದಾಳಿಗಳನ್ನು ಕಂಡವು. ಅವೆಲ್ಲವನ್ನೂ ವಿಫಲಗೊಳಿಸಲಾಯಿತು. ಪಾಕಿಸ್ತಾನ ಸೇನೆಯು ನಿಯಂತ್ರಣ ರೇಖೆಯಲ್ಲಿ ಫಿರಂಗಿ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯಲ್ಲಿ ಸುಮಾರು 35 ರಿಂದ 40 ಜನರನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸಂಕ್ಷಿಪ್ತ ವಿವರಣೆಯಲ್ಲಿ: ‘ಆಪರೇಷನ್ ಸಿಂಧೂರ್ ಅನ್ನು ಸ್ಪಷ್ಟ ಮಿಲಿಟರಿ ಗುರಿಯೊಂದಿಗೆ ಕಲ್ಪಿಸಲಾಗಿತ್ತು’
ಭಯೋತ್ಪಾದಕರನ್ನು ಶಿಕ್ಷಿಸಲು ಮತ್ತು ಅವರ ಮೂಲಸೌಕರ್ಯವನ್ನು ನಾಶಮಾಡಲು ಸ್ಪಷ್ಟ ಮಿಲಿಟರಿ ಗುರಿಯೊಂದಿಗೆ ‘ಆಪರೇಷನ್ ಸಿಂಧೂರ್’ ಕಲ್ಪಿಸಲಾಗಿತ್ತು. ಒಂಬತ್ತು ಭಯೋತ್ಪಾದಕ ಗುರಿಗಳಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು ಎಂದು ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ 26 ಜೀವಗಳನ್ನು ಕೊಲ್ಲಲ್ಪಟ್ಟ ಕ್ರೌರ್ಯ ಮತ್ತು ವಿಧಾನದ ಬಗ್ಗೆ ನೀವೆಲ್ಲರೂ ತಿಳಿದಿದ್ದೀರಿ. ಆ ಭಯಾನಕ ದೃಶ್ಯ ಮತ್ತು ನಮ್ಮ ಕುಟುಂಬ ಅನುಭವಿಸಿದ ನೋವನ್ನು ನಮ್ಮ ಸಶಸ್ತ್ರ ಪಡೆಗಳು ಮತ್ತು ರಕ್ಷಣೆಯಿಲ್ಲದ ನಾಗರಿಕರ ಮೇಲೆ ಇತ್ತೀಚೆಗೆ ನಡೆದ ಹಲವಾರು ಭಯೋತ್ಪಾದಕ ದಾಳಿಗಳೊಂದಿಗೆ ನೀವು ಸಂಯೋಜಿಸಿದಾಗ, ಒಂದು ರಾಷ್ಟ್ರವಾಗಿ ನಮ್ಮ ಸಂಕಲ್ಪದ ಮತ್ತೊಂದು ಬಲವಾದ ಹೇಳಿಕೆಯನ್ನು ನೀಡುವ ಸಮಯ ಬಂದಿದೆ ಎಂದು ನಮಗೆ ತಿಳಿದಿತ್ತು. ಹೀಗಾಗಿ ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಲಾಯಿತು.
ನಮ್ಮ ಗುರಿ ಉಗ್ರರ ನೆಲೆ ನಾಶ ಮಾಡುವುದಾಗಿತ್ತು. ನಂತರದಲ್ಲಿ ಪಾಕಿಸ್ತಾನ ನಮ್ಮ ನಾಗರಿಕರು, ಜನವಸತಿ ಹಳ್ಳಿಗಳು ಮತ್ತು ಗುರುದ್ವಾರಗಳಂತಹ ಧಾರ್ಮಿಕ ಸ್ಥಳಗಳು, ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿದ್ದರಿಂದ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಹೇಳಿದ್ದಾರೆ.