HomeLatest NewsBREAKING: ಗೋವಾ ಸಾರಿಗೆ ಬಸ್- ಕಾರು ಭೀಕರ ಅಪಘಾತ: ಮೂವರು ದುರ್ಮರಣ

BREAKING: ಗೋವಾ ಸಾರಿಗೆ ಬಸ್- ಕಾರು ಭೀಕರ ಅಪಘಾತ: ಮೂವರು ದುರ್ಮರಣ

ಗದಗ: ಗೋವಾ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕಾರು ಚಾಲಕ ಈರಣ್ಣ ಉಪ್ಪಾರ, ರವಿ ನೆಲ್ಲೂರು, ಅರ್ಜುನ್ ಮೃತ ದುರ್ದೈವಿಗಳು.

ಎನ್ ಹೆಚ್ 63ರಲ್ಲಿ ಡಿವೈಡರ್ ಗೆ ಡಿಕ್ಕಿಹೊಡೆದು ಕಾರು ಬಳಿಕ ಬಸ್ ಗೆ ಗುದ್ದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular