ನವದೆಹಲಿ: ಶೀಘ್ರದಲ್ಲೇ ನಿಮ್ಮ ನೆಚ್ಚಿನ ಸೂಪರ್ ಮಾರ್ಕೆಟ್ ಮತ್ತು ಶೋರೂಂಗಳಲ್ಲಿ ಯುರೋಪಿಯನ್ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಇತಿಹಾಸದಲ್ಲೇ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಈ ಒಪ್ಪಂದದ ಅಡಿಯಲ್ಲಿ ಹಲವು ಉತ್ಪನ್ನಗಳ ಮೇಲೆ ಶೂನ್ಯ ಸುಂಕ(Zero Duty) ವಿಧಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಚಾಕೊಲೇಟ್ ವೈನ್‌ನಿಂದ ಹಿಡಿದು ಐಷಾರಾಮಿ ಕಾರುಗಳವರೆಗೆ ಹಲವು ವಸ್ತುಗಳು ಅಗ್ಗವಾಗಲಿವೆ.
ಏನೆಲ್ಲಾ ಅಗ್ಗವಾಗಲಿದೆ? ಇಲ್ಲಿದೆ ಡೀಟೇಲ್ಸ್:
1.ಐಷಾರಾಮಿ ಕಾರುಗಳು: ಆಡಿ, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್‌ನಂತಹ ಐಷಾರಾಮಿ ಕಾರುಗಳ ಮೇಲಿನ ಸುಂಕ ಶೇ. 110 ರಿಂದ ಕೇವಲ ಶೇ. 10ಕ್ಕೆ ಇಳಿಯಲಿದೆ (ನಿಗದಿತ ಕೋಟಾದಡಿ).
2.ಮದ್ಯ ಮತ್ತು ಪಾನೀಯಗಳು ಅಗ್ಗ:
ಮದ್ಯದ ಮೇಲಿನ ಸುಂಕವನ್ನು ಶೇ. 150 ರಿಂದ ಶೇ. 40ಕ್ಕೆ ಇಳಿಸಲಾಗಿದೆ.ಬಿಯರ್ ಮೇಲಿನ ಸುಂಕ ಶೇ. 110 ರಿಂದ ಶೇ. 50ಕ್ಕೆ ಇಳಿಕೆಯಾಗಿದ್ದರೆ, ಆಲ್ಕೋಹಾಲ್ ರಹಿತ ಬಿಯರ್ (Non-alcoholic beer) ಮೇಲಿನ ಸುಂಕವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.
3.ಅಡುಗೆ ಮನೆ ಆಹಾರ ಪದಾರ್ಥಗಳ ಬೆಲೆ ಇಳಿಕೆ:
ಆಲಿವ್ ಆಯಿಲ್, ಹಣ್ಣಿನ ಜ್ಯೂಸ್, ಪಾಸ್ಟಾ ಮತ್ತು ಚಾಕೊಲೇಟ್‌ಗಳ ಮೇಲಿನ ಸುಂಕವು ಶೇ. 45-55 ರಿಂದ ಶೂನ್ಯಕ್ಕೆ (Zero) ಇಳಿಕೆಯಾಗಿದೆ.ಕಿವಿ ಮತ್ತು ಪೇರ್ಸ್ (Pears) ಅಂತಹ ಹಣ್ಣುಗಳ ಮೇಲಿನ ಸುಂಕ ಶೇ. 33 ರಿಂದ ಶೇ. 10ಕ್ಕೆ ಇಳಿಕೆಯಾಗಿದೆ.
4.ವೈದ್ಯಕೀಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ:
ಆಸ್ಪತ್ರೆಗಳಿಗೆ ಬಳಕೆಯಾಗುವ ವೈದ್ಯಕೀಯ ಉಪಕರಣಗಳು ಮತ್ತು ಸರ್ಜಿಕಲ್ ಸ್ಕ್ಯಾನರ್‌ಗಳ ಮೇಲಿನ ಸುಂಕ ಶೂನ್ಯವಾಗಲಿದೆ.ವಿಮಾನ ಮತ್ತು ಬಾಹ್ಯಾಕಾಶ ಉಪಕರಣಗಳ ಭಾಗಗಳ ಮೇಲಿನ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, ಇದು ವಿಮಾನಯಾನ ಕ್ಷೇತ್ರಕ್ಕೆ ವರವಾಗಲಿದೆ.
5.ಭಾರತೀಯ ರಫ್ತುದಾರರಿಗೆ ಬಂಪರ್ ಆಫರ್ (Exports):
ಭಾರತದ ಜವಳಿ (Textiles), ಸಿದ್ಧ ಉಡುಪುಗಳು ಮತ್ತು ಪಾದರಕ್ಷೆಗಳಿಗೆ ಯುರೋಪ್ ಮಾರುಕಟ್ಟೆಯಲ್ಲಿ ಶೂನ್ಯ ಸುಂಕದ ಪ್ರವೇಶ ಸಿಗಲಿದೆ.ಇದರಿಂದ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ದೇಶಗಳ ಪೈಪೋಟಿಯ ನಡುವೆ ಭಾರತೀಯ ರಫ್ತುದಾರರು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಲಿದೆ.
6.ರತ್ನ, ಆಭರಣ ಮತ್ತು ಆಟಿಕೆಗಳ ರಫ್ತು ಸುಲಭ:
ರತ್ನ ಮತ್ತು ಆಭರಣಗಳು, ಆಟಿಕೆಗಳು ಹಾಗೂ ಕ್ರೀಡಾ ಸಾಮಗ್ರಿಗಳ ಮೇಲಿದ್ದ ಶೇ. 4.7 ರಷ್ಟು ಸುಂಕವನ್ನು ರದ್ದುಗೊಳಿಸಲಾಗಿದೆ.ತೆರಿಗೆ ಪ್ರಮಾಣ ಸಣ್ಣದಾಗಿ ಕಂಡರೂ, ಶೂನ್ಯ ಸುಂಕವು ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ದೇಶದ ಉದ್ಯಮಿಗಳಿಗೆ ಹೆಚ್ಚಿನ ಲಾಭಾಂಶ (Margin) ನೀಡಲಿದೆ.
7.ರೈಲ್ವೆ ಮತ್ತು ಸಾರಿಗೆ ಕ್ಷೇತ್ರಕ್ಕೆ ಹೊಸ ಅವಕಾಶ:
ಭಾರತದಿಂದ ರಫ್ತಾಗುವ ರೈಲ್ವೆ ಉತ್ಪನ್ನಗಳು, ಹಡಗುಗಳು ಮತ್ತು ಬೇಸ್ ಮೆಟಲ್‌ಗಳ ಮೇಲಿನ ಶೇ. 10 ರಷ್ಟು ಸುಂಕ ರದ್ದಾಗಿದೆ.ಇದು ಯುರೋಪ್‌ನ ಮೂಲಸೌಕರ್ಯ ಮತ್ತು ಸಾರಿಗೆ ಯೋಜನೆಗಳಲ್ಲಿ ಭಾರತೀಯ ಕಂಪನಿಗಳು ಪಾಲ್ಗೊಳ್ಳಲು ದಾರಿ ಮಾಡಿಕೊಟ್ಟಿದೆ.
8.ಸಮುದ್ರ ಉತ್ಪನ್ನಗಳು ಮತ್ತು ಕೆಮಿಕಲ್ ಉದ್ಯಮ
ಭಾರತದ ಸಮುದ್ರ ಉತ್ಪನ್ನಗಳು (ಮೀನು, ಸಿಗಡಿ ಇತ್ಯಾದಿ), ರಾಸಾಯನಿಕಗಳು ಮತ್ತು ದಿನಬಳಕೆ ವಸ್ತುಗಳಿಗೆ ಯುರೋಪ್‌ನಲ್ಲಿ ಭರ್ಜರಿ ಬೇಡಿಕೆ ಬರಲಿದೆ.ಈವರೆಗೆ ಇದ್ದ ಶೇ. 10.5 ರಿಂದ ಶೇ. 26 ರಷ್ಟು ಸುಂಕವನ್ನು ಈಗ ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದ ಭಾರತೀಯ ರಫ್ತುದಾರರಿಗೆ ಯುರೋಪ್ ಮಾರುಕಟ್ಟೆಯಲ್ಲಿ ದೊಡ್ಡ ಲಾಭ ಸಿಗಲಿದೆ.
ಯಾವ ವಸ್ತುಗಳ ಬೆಲೆ ಇಳಿಕೆಯಾಗುವುದಿಲ್ಲ? (ಸ್ಥಿರವಾಗಿ ಉಳಿಯುವ ಬೆಲೆಗಳು):
ಡೈರಿ ಮತ್ತು ಕೃಷಿ ಉತ್ಪನ್ನಗಳು: ಭಾರತದ ಕೋಟ್ಯಂತರ ಸಣ್ಣ ರೈತರ ಹಿತದೃಷ್ಟಿಯಿಂದ ಹಾಲು, ಬೆಣ್ಣೆ ಮತ್ತು ಪ್ರಮುಖ ಕೃಷಿ ಉತ್ಪನ್ನಗಳನ್ನು ಈ ಒಪ್ಪಂದದಿಂದ ಹೊರಗಿಡಲಾಗಿದೆ. ಹಾಗಾಗಿ ಇವುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.ಸೂಕ್ಷ್ಮ ಕೈಗಾರಿಕೆಗಳು: ದೇಶೀಯ ಉತ್ಪಾದಕರಿಗೆ ತೊಂದರೆಯಾಗದಂತೆ ಕೆಲವು ಕೈಗಾರಿಕಾ ಕ್ಷೇತ್ರಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

