HomeIndiaಜೂನ್ 4ಕ್ಕೆ ಕೇಂದ್ರದಲ್ಲಿ INDIA ಕೂಟದ ಸರ್ಕಾರ; ಖರ್ಗೆ ವಿಶ್ವಾಸ

ಜೂನ್ 4ಕ್ಕೆ ಕೇಂದ್ರದಲ್ಲಿ INDIA ಕೂಟದ ಸರ್ಕಾರ; ಖರ್ಗೆ ವಿಶ್ವಾಸ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ INDIA ಒಕ್ಕೂಟ ಬಹುಮತ ಪಡೆಯಲಿದ್ದು, ಜೂನ್ 4ರ ಬಳಿಕ ಕೇಂದ್ರದಲ್ಲಿ ನಾವು ಸರ್ಕಾರ ರಚಿಸುವುದು ಖಚಿತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಲಕ್ನೋದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದ್ದು, INDIA ಒಕ್ಕೂಟ ಬಡವರ ಪರವಾಗಿ ಇದ್ದರೆ, NDA ಒಕ್ಕೂಟ ಶ್ರೀಮಂತರ ಪರವಾಗಿದೆ ಎಂದರು.

ಅವರು ಧರ್ಮದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ, ನಾವು ಬಡವರು, ದಲಿತ, ಆದಿವಾಸಿ, ಹಿಂದುಳಿದ ಪರವಾಗಿ ಮತ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರದ ವಿರುದ್ಧ ಬೇಸತ್ತಿರುವ ಮತದಾರರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular