HomeLive Newsಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ 2024; ನಾಳೆ ಭಾರತ ಹಾಗೂ ನೇಪಾಳ ಕಾದಾಟ

ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ 2024; ನಾಳೆ ಭಾರತ ಹಾಗೂ ನೇಪಾಳ ಕಾದಾಟ

ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಸಣ್ಣ ಪುಟ್ಟ ತಂಡಗಳು ಸಹ ಭರ್ಜರಿ ಹೋರಾಟ ನೀಡುತ್ತಿವೆ.  ಮಹಿಳಾ ಭಾರತ ತಂಡ ನಿನ್ನೆಯಷ್ಟೇ uae ಎದುರು 78 ರನ್ ಗಳಿಂದ ಭರ್ಜರಿ ಜಯ ಸಾಧಿಸಿದರೆ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳದ ಎದುರು 9 ವಿಕೆಟ್ ಗಳಿಂದ   ಜಯಭೇರಿಯಾಗಿದೆ. ಪಾಕಿಸ್ತಾನ ತಂಡ ಮೊದಲ ಜಯ ಕಾಣುವ ಮೂಲಕ ತನ್ನ ಖಾತೆ ತೆರೆದಿದೆ.

ನಾಳೆ ಡಾಂಬುಲ್ಲಾದಲ್ಲಿ ಭಾರತ ಹಾಗೂ ನೇಪಾಳ  ಮುಖಾಮುಖಿಯಾಗಲಿವೆ. ಬ್ಯಾಕ್ ಟು ಬ್ಯಾಕ್ ಜಯಸಾಧಿಸುವ ಮೂಲಕ ಗ್ರೂಪ್ ಎ ನ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಭಾರತದ ತಂಡ ತನ್ನ ಮೂರನೇ ಗೆಲುವಿಗೆ ಸಜ್ಜಾಗಿದೆ. ಬಲಿಷ್ಠ ಭಾರತ ತಂಡದ ಎದುರು ನೇಪಾಳ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಕಾದುನೋಡಬೇಕಾಗಿದೆ. ಭಾರತ ತಂಡ ಈ ಪಂದ್ಯದಲ್ಲಿ ಜಯ ಕಂಡರೆ ತನ್ನ ಸೆಮಿ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular