HomeIndiaIndependence Day 2023 : ಇಲ್ಲಿದೆ ಪ್ರಧಾನಿ ಮೋದಿ `ಸ್ವಾತಂತ್ರ್ಯೋತ್ಸವ ಭಾಷಣ’ದ ಮುಖ್ಯಾಂಶಗಳು|PM Modi

Independence Day 2023 : ಇಲ್ಲಿದೆ ಪ್ರಧಾನಿ ಮೋದಿ `ಸ್ವಾತಂತ್ರ್ಯೋತ್ಸವ ಭಾಷಣ’ದ ಮುಖ್ಯಾಂಶಗಳು|PM Modi

ನವದೆಹಲಿ : ಇಂದು ದೇಶಾದ್ಯಂತ ಸಂಭ್ರಮದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ 10ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಮೂಲಕ ಐತಿಹಾಸಿಕ ಸ್ಮಾರಕ ರೆಡ್ ಫೋರ್ಟ್ನಲ್ಲಿ 10 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ದಾಖಲೆ ಬರೆದಿದ್ದಾರೆ.

ರಾಷ್ಟ್ರವು ಇಂದು 77ನೇ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಿದ್ದು, ಈ ಅಮೃತ ಘಳಿಗೆಯಲ್ಲಿ ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದೆ. ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧ್ವಜಾರೋಹಣದ ಬಳಿಕ ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.  ದೇಶದ 140 ಕೋಟಿ ನಿವಾಸಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು, ಭಾರತ ವಿಶಾಲವಾದ ದೇಶವಾಗಿದೆ. ವಿಶ್ವದ ಅತಿ ದೊಡ್ಡ ಲೋಕತಂತ್ರ, ಜನಸಂಖ್ಯೆಯಲ್ಲಿ ವಿಶ್ವದಲ್ಲೇ ನಂಬರ್ 1 ಆಗಿದ್ದೇವೆ.ಸ್ವಾತಂತ್ರ್ಯಕ್ಕಾಗಿ ಅನೇಕರು ಬಲಿದಾನ ಕೊಟ್ಟಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಅನೇಕರು ಕೈ ಜೋಡಿಸಿದ್ದಾರೆ. ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ದೇಶಧ ಪ್ರಜೆಗಳು ಕೈ ಜೋಡಿಸಿದ್ದಾರೆ. ಇಡಿ ದೇಶ ಮಣಿಪುರದ ಜೊತೆಗೆ ಇದೆ. ಮಣಿಪುರದಲ್ಲಿ ಶಾಂತಿ ನೆಲಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಶಾಂತಿ ಮಾತುಕತೆಯಿಂದ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯ. ಭಾರತದ ಮೇಎಲ ಹಲವು ಬಾರಿ ಅಕ್ರಮಣಗಳು ನಡದಿವೆ. ಆದರೆ ಅದನ್ನು ಮೆಟ್ಟಿ ನಿಂತಿದ್ದೇವೆ. ಸಾವಿರಾರು ವರ್ಷಗಳವರೆಗೂ ಪ್ರಭಾವ ಬೀರುತ್ತಲೇ ಇದೆ. ಸ್ವಾತಂತ್ರ್ಯಕ್ಕಾಗಿ ಹಲವು ಬಲಿದಾನಗಳು ನಡೆದಿವೆ. ಭಾರತದ ಪ್ರತಿ ಹಳ್ಳಿಯ ನಾರಿಯರೂ ಕೂಡ ಹೋರಾಡಿದ್ದಾರೆ. ಅನೇಕರು ಜೈಲು ಸೇರಿದ್ದಾರೆ. 1947 ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಬಂಧನಮುಕ್ತವಾಯಿತು. ತ್ಯಾಗ, ತಪಸ್ಸಿನಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿದರು.

1 ಸಾವಿರ ವರ್ಷಗಳ ವರೆಗೆ ಭಾರತೀಯರು ಗುಲಾಮಗಿರಿಯಲ್ಲಿ ನಲುಗಿದೆ. ಗುಲಾಮಗರಿ ಮನಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸಲಾಗಿದೆ. ಹೊಸ ಸಂಕಲ್ಪ ಮತ್ತು ವಿಶ್ವಾಸದೊಂದಿಗೆ ಇಂದು ದೇಶ ಮುನ್ನಡೆಯುತ್ತಿದೆ.ಅಮೃತ ಕಾಲದ ಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ.ಭಾರತ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.  ವೈವಿದ್ಯತೆಯನ್ನು ಭವಿಷ್ಯದಲ್ಇ ಭಾರತ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ.

ಯುವಶಕ್ತಿಮೇಲೆ ನನಗೆ ನಂಬಿಕೆ, ವಿಶ್ವಾಸವಿದೆ. ಯುವಶಕ್ತಿಯಿಂದ ವಿಶ್ವದಲ್ಲಿ ಪ್ರಭಾವ ಬೀರಿದೆ. ಭಾರತದ ಸ್ಟಾರ್ಟ್ ಅಪ್ ಅಭಿವೃದ್ಧಿಗೆ ಯುವಶಕ್ತಿ ಪ್ರಭಾವ ಬೀರಿದೆ. ಟೆಕ್ನಾಲಜಿಯಲ್ಲಿ ಭಾತತದ ಪಾತ್ರ ಹೊಸ ಪ್ರಯೋಗವಾಗಲಿದೆ. ವಿಶ್ವ ಸಮೃದ್ದಿ ದೇಶಗಳಲ್ಲಿ ಡಿಜಿಟಲ್ ಇಂಡಿಯಾ ಇದೆ ಎಂದರು.

ಆಧುನಿಕತೆಯತ್ತ ಭಾರತ ಸಾಗುತ್ತಿದೆ. ವಿವಿ, ಗುರುಕುಲಗಳಲ್ಲಿ ಭಾರತದ ಭವಿಷ್ಯ ಅಡಗಿದೆ. ಶಿಕ್ಷಣ, ಸಾಮಾರ್ಥ್ಯದಿಂದ ಪ್ರಗತಿ ಸಾಧ್ಯ.ಭಾರತದ ಅಭಿವೃದ್ಧಿಗೆ ಸಾಮಾರ್ಥ್ಯ, ಆತ್ಮವಿಶ್ವಾಸ ಮುಖ್ಯ, ದೇಶ ಪ್ರಗತಿಯತ್ತ ಮುನ್ನಡೆ ಸಾಧಿಸುತ್ತಿದೆ.  ಭಾರತದ ಅಭಿವೃದ್ಧಿಗೆ ರೈತರು, ಯುವಶಕ್ತಿ, ಶ್ರಮಿಕರ ಕೊಡುಗೆ ಅಪಾರವಾಗಿದೆ ಎಂದರು.

ಈಗ ಭಾರತವನ್ನ ನಿಲ್ಲಿಸಲಾಗಲ್ಲ ಎಂದು ವಿಶ್ವವೇ ಹೇಳಿದೆ. ಕೊರೊನಾ ಬಳಿಕ ಇಡೀ ವಿಶ್ವವೇ ಭರತವನ್ನು ಗೌರವಿಸುತ್ತಿದೆ. ಜಿ.20 ಆಯೋಜನೆ ಕಾರ್ಯಕ್ರಮಗಳಿಂದ ಸಾಬೀತಾಗಿದೆ.ಭಾರತದ ಡೈವರ್ಸಿಟಿಯನ್ನು ವಿಶ್ವವೇ ನೋಡುತ್ತಿದೆ.ಇಂದು ಭಾರತ ಆಮದು ವೇಗವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಭಾರತದ ಸಾಮರ್ಥ್ಯ ಮತ್ತು ಸಾಧ್ಯತೆಗಳು ವಿಶ್ವಾಸದ ಹೊಸ ಎತ್ತರವನ್ನು ದಾಟಲಿವೆ ಎಂಬುದು ಖಚಿತವಾಗಿದೆ. ವಿಶ್ವಾಸದ ಈ ಹೊಸ ಎತ್ತರಗಳು ಹೊಸ ಸಾಮರ್ಥ್ಯಗಳೊಂದಿಗೆ ಮುಂದುವರಿಯುತ್ತವೆ. ಇಂದು ಜಿ-20 ಶೃಂಗಸಭೆಯ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ದೊರೆತಿದೆ. ಕಳೆದ ವರ್ಷದಲ್ಲಿ, ಜಿ 20 ಯ ಹಲವಾರು ಕಾರ್ಯಕ್ರಮಗಳು ಭಾರತದ ಮೂಲೆ ಮೂಲೆಯಲ್ಲಿ ನಡೆದ ವಿಧಾನವು ಭಾರತದ ಸಾಮಾನ್ಯ ಜನರ ಸಾಮರ್ಥ್ಯ, ಭಾರತದ ವೈವಿಧ್ಯತೆಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ.

ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ, ಹೊಸ ವಿಶ್ವ ಕ್ರಮ, ಹೊಸ ಭೌಗೋಳಿಕ-ರಾಜಕೀಯ ಸಮೀಕರಣವು ರೂಪುಗೊಳ್ಳುತ್ತಿದೆ. ಭೌಗೋಳಿಕ ರಾಜಕೀಯದ ವ್ಯಾಖ್ಯಾನ ಬದಲಾಗುತ್ತಿದೆ. ಇಂದು, ಹೊಸ ವಿಶ್ವ ವ್ಯವಸ್ಥೆಯನ್ನು ರೂಪಿಸುವಲ್ಲಿ 140 ಕೋಟಿ ಜನರ ಸಾಮರ್ಥ್ಯವನ್ನು ಕಾಣಬಹುದು ಎಂದರು.

ಭಾರತವು ವಿಶ್ವದ ಆರ್ಥಿಕತೆಯಲ್ಲಿ 10 ನೇ ಸ್ಥಾನದಲ್ಲಿತ್ತು. ಈಗ 5 ನೇ ಸ್ಥಾನದಲ್ಲಿದೆ. ಮುಂದಿನ ಬಾರಿ ಭಾರತದ ಆರ್ಥಿಕ ಸ್ಥಿತಿ 3 ನೇ ಸ್ಥಾನಕ್ಕೆ ತರುತ್ತೇವೆ. ಇದು ಮೋದಿ ಗ್ಯಾರಂಟಿ ಎಂದರು.

ದೇಶದಲ್ಲಿ ಪ್ರತಿಯೊಬ್ಬರಿಗೂ ಶೌಚಾಲಯ ನಿರ್ಮಾಣ, ನಮ್ಮ ಟ್ರ್ಯಾಕ್ ರೆಕಾರ್ಡ್ ನಮ್ಮ ಸಾಧನೆಯನ್ನು ತಿಳಿಸುತ್ತದೆ.  ಇಡೀ ವಿಶ್ವವೇ ಹಣ ದುಬ್ಬರದಿಂದ ಸಂಕಷ್ಟದಲ್ಲಿತ್ತು. ಆದರೆ ಭಾರತ ಹೊಳೆಯುತ್ತಿತ್ತು.  ದೇಶದ ಸರ್ವಜನ ಹಿತವೇ ನಮ್ಮ ಗುರಿ, ಜನಶಕ್ತಿ, ಯುವಶಕ್ತಿಯಿಂದ ದೇಶದ ಅಭಿವೃದ್ಧಿಯಾಗಲಿದೆ ಎಂದರು.

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular