HomeLatest NewsBIG NEWS : ದೇಶದಲ್ಲಿ 'ಕೊರೊನಾ ಕೇಸ್' ಹೆಚ್ಚಳ : 7,000 ಗಡಿ ದಾಟಿದ ಕೋವಿಡ್...

BIG NEWS : ದೇಶದಲ್ಲಿ ‘ಕೊರೊನಾ ಕೇಸ್’ ಹೆಚ್ಚಳ : 7,000 ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ |Covid-19

ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಕ್ರಮೇಣ ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 306 ಹೊಸ ಸೋಂಕುಗಳು ವರದಿಯಾಗಿವೆ ಮತ್ತು ಸಕ್ರಿಯ ಸಂಖ್ಯೆ 7,121 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹಂಚಿಕೊಂಡ ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಒಂದು, ಕೇರಳದಲ್ಲಿ 3 ಮತ್ತು ಕರ್ನಾಟಕದಲ್ಲಿ 2 ಸೇರಿದಂತೆ 6 ಸಾವುಗಳು ವರದಿಯಾಗಿವೆ.

ಕೇರಳದಲ್ಲಿ ಒಂದೇ ದಿನದಲ್ಲಿ 170 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,223 ಕ್ಕೆ ಏರಿಕೆಯಾಗಿದೆ. ಗುಜರಾತ್ನಲ್ಲಿ 114 ಹೊಸ ಸೋಂಕುಗಳು ಮತ್ತು 1,223 ಸಕ್ರಿಯ ಪ್ರಕರಣಗಳಿವೆ. ಈ ಮಧ್ಯೆ, ಕರ್ನಾಟಕದಲ್ಲಿ 100 ಹೊಸ ಪ್ರಕರಣಗಳು ಮತ್ತು ಒಟ್ಟು 459 ಸಕ್ರಿಯ ಸೋಂಕುಗಳು ದಾಖಲಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 66 ಸೋಂಕುಗಳು ದಾಖಲಾಗಿದ್ದು, ನಗರದ ಒಟ್ಟು ಪ್ರಕರಣಗಳ ಸಂಖ್ಯೆ 757 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular