ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ಬಂಜೆತನ ಸಕಾರಣವಾಗದು: ಹೈಕೋರ್ಟ್ ಮಹತ್ವದ ಹೇಳಿಕೆ

ಪಾಟ್ನಾ: ಮಗುವನ್ನು ಹೆರಲು ಅಸಮರ್ಥತೆಯು ವೈವಾಹಿಕ ಜೀವನದ ಭಾಗವಾಗಿದೆ. ಮದುವೆಯನ್ನು ವಿಸರ್ಜಿಸಲು ಅದು ಆಧಾರವಲ್ಲ ಹಿಂದೂ ವಿವಾಹ ಕಾಯ್ದೆ ಅಡಿ ವಿಚ್ಛೇದನ ಪಡೆದುಕೊಳ್ಳಲು ಬಂಜೆತನ ಸಕಾರಣವಾಗದು ಎಂದು ಪಾಟ್ನಾ ಹೈಕೋರ್ಟ್ ತಿಳಿಸಿದೆ.

ಮಗುವಿಗೆ ಜನ್ಮ ನೀಡುವ ಸಾಮರ್ಥ್ಯ ಇಲ್ಲದಿರುವುದು ವೈವಾಹಿಕ ಜೀವನದ ಸಮಸ್ಯೆಯ ಒಂದು ಅಂಶವಷ್ಟೇ. ಹೀಗಾಗಿ ದತ್ತು ತೆಗೆದುಕೊಳ್ಳುವುದು ಅಥವಾ ಮಕ್ಕಳನ್ನು ಪಡೆದುಕೊಳ್ಳಲು ಪರ್ಯಾಯ ಆಯ್ಕೆಗಳ ಬಗ್ಗೆ ದಂಪತಿ ಯೋಚಿಸಬೇಕು ಎಂದು ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಿತೇಂದ್ರ ಕುಮಾರ್ ಮತ್ತು ಪಿ.ಬಿ. ಭಜಂತ್ರಿ ಅವರುಗಳಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಸೋನುಕುಮಾರ್ ಎಂಬುವವರು ಸಲ್ಲಿಸಿದ್ದ ಮರುಪರಿಶೀಲನಾ ಮೇಲ್ಮನವಿಯನ್ನು ಪಾಟ್ನಾ ಹೈಕೋರ್ಟ್ ನ್ಯಾಯಪೀಠ ವಜಾಗೊಳಿಸಿದ್ದು, ವಿಚ್ಛೇದನಕ್ಕೆ ಬಂಜೆತನ ಸಕಾರಣವಾಗದು ಎಂದು ತಿಳಿಸಿದೆ.

ಸೋನುಕುಮಾರ್ ವಿರುದ್ಧ ರೀನಾ ದೇವಿ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಪೀಠದಲ್ಲಿ ನಡೆದಿದ್ದು, ಮಗು ಹೊಂದುವ ಸಾಮರ್ಥ್ಯ ಇಲ್ಲದಿರುವುದು ಮದುವೆ ರದ್ದುಗೊಳಿಸಲು ಆಧಾರವಾಗುವುದಿಲ್ಲ. ದಂಪತಿಗಳಲ್ಲಿ ಯಾರಾದರೂ ಒಬ್ಬರಲ್ಲಿ ಸಮಸ್ಯೆ ಕಂಡು ಬರಬಹುದಾಗಿದೆ. ಇಂತಹ ಸಂದರ್ಭದಲ್ಲಿ ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡಲು ಆಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read