Maharaja Trophy : ಇಂದಿನ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗ ಮೈಸ್ಟಿಕ್ಸ್ ಮುಖಾಮುಖಿ

ಇಂದಿನ ಎರಡನೇ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ವೈಶಾಕ್ ವಿಜಯ್ ಕುಮಾರ್ ನಾಯಕತ್ವದ ಗುಲ್ಬರ್ಗ ಮೈಸ್ಟಿಕ್ಸ್  ಮುಖಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ಇನ್ನೂ ತನ್ನ ಮೊದಲ ಜಯದ ಹುಡುಕಾಟದಲ್ಲಿದೆ. ಸೆಮಿ ಫೈನಲ್ ಹಂತಕ್ಕೆ ತಲುಪುವ ಅವಕಾಶವಿಲ್ಲದೆ ಇರುವುದು ಬೆಂಗಳೂರು ಅಭಿಮಾನಿಗಳಿಗೆ ನಿರಾಶೆ ತಂದಿದ್ದು, ಇಂದಾದರೂ ಜಯ ಗಳಿಸಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ  ಹಾರೈಸುತ್ತಿದ್ದಾರೆ.

ಮಹಾರಾಜ ಟ್ರೋಫಿಯ 24ನೇ ಪಂದ್ಯ ಇದಾಗಿದ್ದು, ಇನ್ನು 6 ಪಂದ್ಯಗಳು ಬಾಕಿ ಉಳಿದಿವೆ. ಹುಬ್ಬಳ್ಳಿ ಟೈಗರ್ಸ್ ಸೆಮಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ ತಂಡಗಳು ಎಂಟ್ರಿ ಕೊಡಲು ಪೈಪೋಟಿ ನಡೆಸಿವೆ. ಆಗಸ್ಟ್ 28ರಂದು ಎರಡು ಸೆಮಿ ಫೈನಲ್ ಹಾಗೂ  29ನೇ ತಾರೀಕಿನಂದು ಫೈನಲ್ ಪಂದ್ಯ ನಡೆಯಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read