HomeInternationalಕೆನಡಾ: ಕಾರಿನ ಕಿಟಕಿ ಒಡೆದು ಸೋಡಾ ಕ್ಯಾನ್‌ಗಳನ್ನು ಖಾಲಿ ಮಾಡಿದ ತಿಂಡಿಪೋತ ಕರಡಿ

ಕೆನಡಾ: ಕಾರಿನ ಕಿಟಕಿ ಒಡೆದು ಸೋಡಾ ಕ್ಯಾನ್‌ಗಳನ್ನು ಖಾಲಿ ಮಾಡಿದ ತಿಂಡಿಪೋತ ಕರಡಿ

ಕೆನಡಾದ ಬ್ರಿಟೀಷ್ ಕೊಲಂಬಿಯಾದ ಸನ್‌ಶೈನ್ ಕರಾವಳಿಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ತಡರಾತ್ರಿ ಮಲಗಿದ್ದ ವೇಳೆ ತಮ್ಮ ನಾಯಿ ಜೋರಾಗಿ ಬೊಗಳುವುದು ಕೇಳಿಸಿ ಎಚ್ಚರವಾಗಿದೆ. ಏನೆಂದು ಅರಿಯಲು ಮನೆಯ ಮಹಡಿ ಮೇಲೆ ಬಂದ ಮಹಿಳೆಗೆ ಭಾರೀ ಅಚ್ಚರಿಯೊಂದು ಕಾದಿದೆ.

ಮನೆಯಂಗಳದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನ ಬಾಗಿಲನ್ನು ಮುರಿದ ಕರಡಿಯೊಂದು ಅದರಲ್ಲಿಟ್ಟಿದ್ದ ಸೋಡಾ ಕ್ಯಾನ್‌ಗಳನ್ನು ಖಾಲಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗ್ಗಿನ ಜಾವ ಮೂರು ಗಂಟೆ ವೇಳೆ ಹೀಗೆ ಎದ್ದು ನೋಡಿದ ಶರೋನ್ ರೋಸೆಲ್, ತಮ್ಮ ಕಾರಿನ ಕಿಟಕಿ ಗಾಜುಗಳು ಮುರಿದಿದ್ದು, ಕರಿ ಕರಡಿಯೊಂದು ತನ್ನ ಚೇಷ್ಟೆಯಲ್ಲಿ ಮುಳುಗಿರುವುದನ್ನು ಕಂಡುಕೊಂಡಿದ್ದಾರೆ.

ಕಾರಿನಲ್ಲಿ 72 ಸೋಡಾ ಕ್ಯಾನ್‌ಗಳನ್ನು ಇಟ್ಟಿದ್ದು, ಅದರಲ್ಲಿ 69 ಕ್ಯಾನ್‌ಗಳನ್ನು ಕರಡಿ ಖಾಲಿ ಮಾಡಿದೆ ಎಂದು ರೋಸೆಲ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular