HomeInternationalBREAKING : ಅಮೆರಿಕದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ; ಶೂಟೌಟ್ ಗೆ 8 ಮಂದಿ ಬಲಿ

BREAKING : ಅಮೆರಿಕದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ; ಶೂಟೌಟ್ ಗೆ 8 ಮಂದಿ ಬಲಿ

ಚಿಕಾಗೋ : ಉತ್ತರ ಅಮೆರಿಕದ ಚಿಕಾಗೋ ನಗರದ ಉಪನಗರಗಳಲ್ಲಿ ಎರಡು ಮನೆಗಳಲ್ಲಿ ಎಂಟು ಜನರನ್ನು ಗುಂಡಿಕ್ಕಿ ಕೊಂದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

ಶಂಕಿತ ವ್ಯಕ್ತಿಗಾಗಿ ಪೊಲೀಸರು ಸೋಮವಾರ ಚಿಕಾಗೋ ಬಳಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ನಿವಾಸಗಳಲ್ಲಿ ಒಟ್ಟು 8 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಇಲಿನಾಯ್ಸ್ನ ಜೋಲಿಯಟ್ನ ಪೊಲೀಸ್ ಮುಖ್ಯಸ್ಥ ಬಿಲ್ ಇವಾನ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರೋಮಿಯೋ ನಾನ್ಸ್ ಎಂಬ ಶಂಕಿತನನ್ನು ಹುಡುಕುತ್ತಿದ್ದೇವೆ” ಎಂದು ಅವರು ಹೇಳಿದರು.ಯುನೈಟೆಡ್ ಸ್ಟೇಟ್ಸ್ ನಲ್ಲಿ ಗುಂಡಿನ ದಾಳಿಗಳು ಸಾಮಾನ್ಯವಾಗಿದೆ, ಅಲ್ಲಿ ಜನರಿಗಿಂತ ಹೆಚ್ಚು ಬಂದೂಕುಗಳೇ ಇದೆ ಎಂದು ಮೂಲಗಳು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular