ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಲೋಪ ತಡೆಯುವ ಉದ್ದೇಶದಿಂದ ರೂಪಿಸಲಾಗಿದ್ದ ಹೊಸ ನಿಯಮಾವಳಿಯಲ್ಲಿ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ 2 ಮತ್ತು 3ರ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಆರಂಭಿಸುವುದಾಗಿ ಹೇಳಿದ್ದ ಶಾಲಾ ಶಿಕ್ಷಣ ಇಲಾಖೆ ಸಮಯವನ್ನು ಪರಿಷ್ಕರಿಸಿದ್ದು, ಬೆಳಗ್ಗೆ 10.30 ರಿಂದ ಪೂರ್ವ ಸಿದ್ಧತಾ ಪರೀಕ್ಷೆ ಆರಂಭಿಸುವಂತೆ ತಿಳಿಸಿದೆ.
ಬೆಳಗ್ಗೆ 11 ಗಂಟೆಗೆ ಪರೀಕ್ಷೆ ಆರಂಭಿಸುವುದರಿಂದ ಭೋಜನ ಸಮಯಕ್ಕೆ ತೊಡಕಾಗುತ್ತದೆ ಎನ್ನುವ ಕಾರಣಕ್ಕೆ ಸಮಯ ಪರಿಷ್ಕರಣೆ ಮಾಡಲಾಗಿದೆ. ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳು 9 ಗಂಟೆಗೆ ತರಗತಿಗೆ ಹಾಜರಾಗಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಬೆಳಗ್ಗೆ 9:15ಕ್ಕೆ ಪ್ರಶ್ನೆ ಪತ್ರಿಕೆಯನ್ನು ಶಾಲಾ ಲಾಗಿನ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. 9:15 ರಿಂದ 10 20 ರವರೆಗೆ ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿಕೊಳ್ಳಬೇಕು. ಬೆಳಿಗ್ಗೆ 10.30 ರಿಂದ ಪರೀಕ್ಷೆ ಆರಂಭಿಸಬೇಕು ಎಂದು ಹೇಳಲಾಗಿದೆ.

