HomeKarnatakaವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರಥಮ ಪಿಯುಸಿಗೂ ಕನಿಷ್ಠ ಉತ್ತೀರ್ಣ ಅಂಕ ಶೇ. 33ಕ್ಕೆ ನಿಗದಿಪಡಿಸಿ ಆದೇಶ

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರಥಮ ಪಿಯುಸಿಗೂ ಕನಿಷ್ಠ ಉತ್ತೀರ್ಣ ಅಂಕ ಶೇ. 33ಕ್ಕೆ ನಿಗದಿಪಡಿಸಿ ಆದೇಶ

ಬೆಂಗಳೂರು: ಪ್ರಥಮ ಪಿಯುಸಿಗೆ ಕನಿಷ್ಠ ಉತ್ತೀರ್ಣತಾ ಶೇಕಡಾವಾರು ಪ್ರಮಾಣವನ್ನು ನಿಗದಿಪಡಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಪ್ರಥಮ ಪಿಯುಸಿಗೂ ಕನಿಷ್ಠ ಉತ್ತೀರ್ಣ ಅಂಕ ಶೇ.33ಕ್ಕೆ ನಿಗದಿಪಡಿಸಲಾಗಿದೆ.

ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ನ್ನು ಹೊರಡಿಸಲಾಗಿರುತ್ತದೆ. ಮೇಲೆ ಓದಲಾದ ಕ್ರಮಾಂಕ (2) ರ ಏಕಕಡತದಲ್ಲಿ ನಿರ್ದೇಶಕರು (ಪದವಿಪೂರ್ವ), ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರು ಓದಲಾದ (1)ರ ಅಧಿಸೂಚನೆಯನ್ವಯ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ನ್ನು ಜಾರಿಗೆ ತರುವುದರ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತೀರ್ಣತಾ ಮಟ್ಟವನ್ನು ಪರಿಮಾಣಾತ್ಮಕವಾಗಿ ಹೆಚ್ಚಿಸುವ ದೃಷ್ಟಿಯಿಂದ ಹಾಲಿ ಇರುವ ನಿಯಮಕ್ಕೆ ತಿದ್ದುಪಡಿ ತಂದು ಉತ್ತೀರ್ಣತಾ ಪ್ರಮಾಣವನ್ನು ಪ್ರತಿಶತ 33ಕ್ಕೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುವುದು ಗಮನಾರ್ಹವಾಗಿದ್ದು, ಪದವಿ ಪೂರ್ವ ಶಿಕ್ಷಣವು ಎರಡು ವರ್ಷಗಳ ಸಂಯುಕ್ತ ಕೋರ್ಸ್ ಆಗಿರುವುದರಿಂದ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಎರಡೂ ತರಗತಿಗಳು ಪರಸ್ಪರ ಸಂಬಂಧಿತವಾಗಿವೆ. ದ್ವಿತೀಯ ಪಿಯುಸಿಗೆ ಕನಿಷ್ಠ ಉತ್ತೀರ್ಣತಾ ಪ್ರಮಾಣವನ್ನು ಅನ್ವಯಿಸುವಂತೆಯೇ, 2025-26ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ಅದೇ ಪ್ರಮಾಣವನ್ನು ಅನ್ವಯಿಸುವುದು ಶೈಕ್ಷಣಿಕ ಶಿಸ್ತಿನ ದೃಷ್ಟಿಯಿಂದ ಹಾಗೂ ಸಮಾನ ಮೌಲ್ಯಮಾಪನ ವ್ಯವಸ್ಥೆಯ ದೃಷ್ಟಿಯಿಂದ ಸಮಂಜಸವಾಗಿರುವುದರಿಂದ, ಪ್ರಥಮ ಪಿಯು ವಿಭಾಗಕ್ಕೂ ಸಹ ಕನಿಷ್ಠ ಉತ್ತೀರ್ಣತಾ ಶೇಕಡವನ್ನು 33 ಕ್ಕೆ ನಿಗದಿಪಡಿಸಿ ಸರ್ಕಾರದಿಂದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

ಸರ್ಕಾರವು ಪ್ರಸ್ತಾಪಿತ ವಿಷಯವನ್ನು ನಿಯಮಾನುಸಾರ ಪರಿಶೀಲಿಸಿ, ಮೌಲ್ಯಮಾಪನ ವಿಧಾನದಲ್ಲಿ ಏಕರೂಪತೆ ಕಾಪಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಾಯಕವಾಗುವುದನ್ನು ಮನಗಂಡು, ದ್ವಿತೀಯ ಪಿಯುಸಿಗೆ ಮಾತ್ರ ಅನ್ವಯಿಸಿರುವ ಕನಿಷ್ಠ ಉತ್ತೀರ್ಣತಾ ಪ್ರಮಾಣವನ್ನು ಪ್ರಥಮ ಪಿಯುಸಿಗೂ ವಿಸ್ತರಿಸುವ ಬಗ್ಗೆ ಸ್ಪಷ್ಟ ಆದೇಶ ಹೊರಡಿಸುವುದು ಸೂಕ್ತವೆಂದು ಭಾವಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಇಪಿ 244 ಎಸ್ಎಲ್‌ಬಿ 2025, ದಿನಾಂಕ: 15.10.2025ರಲ್ಲಿನ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ರಲ್ಲಿನ ನಿಯಮ 2(ಎ) ಅನ್ನು ಪ್ರಥಮ ಪಿಯುಸಿ ವಿಭಾಗಕ್ಕೂ ವಿಸ್ತರಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ಅಧಿಸೂಚನೆ ಸಂಖ್ಯೆ:ಇಪಿ 244 ಎಸ್‌ಎಲ್‌ಬಿ 2025, ದಿನಾಂಕ:15.10.2025ರಲ್ಲಿನ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ರಲ್ಲಿನ ನಿಯಮ 2(ಎ) ಯ ವಿಧಾನವನ್ನು ಪ್ರಥಮ ಪಿಯುಸಿ ವಿಭಾಗಕ್ಕೂ ವಿಸ್ತರಿಸಿ, ಉತ್ತೀರ್ಣತಾ ಪ್ರಮಾಣವನ್ನು ಪ್ರತಿಶತ ಶೇ.33ಕ್ಕೆ ನಿಗದಿಪಡಿಸಿ ಆದೇಶಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular