ರೈತರಿಗೆ, ಸಾರ್ವಜನಿಕರಿಗೆ ಮುಖ್ಯ ಮಾಹಿತಿ : ‘ ನರ್ಸರಿ ತಾಂತ್ರಿಕತೆ’ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ : ತೋಟಗಾರಿಕೆ ಇಲಾಖೆ ವತಿಯಿಂದ, ಜೈವಿಕ ಕೇಂದ್ರ, ಹುಳಿಮಾವು, ಬನ್ನೇರುಘಟ್ಟ ರಸ್ತೆ ಬೆಂಗಳೂರು ಇಲ್ಲಿ ನವೆಂಬರ್ 18 ರಿಂದ 24 ರವೆರೆಗೆ “ತೋಟಗಾರಿಕೆಯಲ್ಲಿ ನರ್ಸರಿ ತಾಂತ್ರಿಕತೆ” (Nursery techniques in Horticulture) ಬಗ್ಗೆ ನಗರವಾಸಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರು ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಸಾಮಾನ್ಯರಿಗೆ ರೂ.1,000 ಮತ್ತು ಪರಿಶಿಷ್ಟ ಜಾತಿ / ಪಂಗಡ/ BPL Card Holder/ ವಿದ್ಯಾರ್ಥಿಗಳಿಗೆ ರೂ.500 ಗಳನ್ನು ಜೈವಿಕ ಕೇಂದ್ರ, ಹುಳಿಮಾವು, ಬೆಂಗಳೂರು ರವರ ಕಚೇರಿಯಲ್ಲಿ ತರಬೇತಿಯ ದಿನದಂದು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9449833153, 9066764248, 9399813893 ಅಥವಾ ಇ-ಮೇಲ್: sadh.co23@gmail.com ಅಥವಾ jaivikakendra.hulimavu@gmail.com ಮೂಲಕ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read