ಬೆಳೆ ವಿಮೆ ಕುರಿತಂತೆ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬಳ್ಳಾರಿ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24 ನೇ ಸಾಲಿಗೆ ತೋಟಗಾರಿಕೆಯ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಿ ಎಂದು ತೋಟಗಾರಿಕೆ ಉಪನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ (ಹಳ್ಳಿ, ಗ್ರಾಮ ಪಂಚಾಯಿತಿ, ಹೋಬಳಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯು ನೆರವಾಗಲಿದೆ.

ವಿಮಾ ಯೋಜನೆಯಡಿ ಒಳಪಡುವ ಬೆಳೆಗಳು

ಕೆಂಪು ಮೆಣಸಿನಕಾಯಿ(ನೀರಾವರಿ): ಬೆಳೆಯು ವಿಮಾ ಪ್ರದೇಶದಲ್ಲಿ ಒಳಪಡುವ ಹೋಬಳಿಗಳು ಕಂಪ್ಲಿ, ಕುರುಗೋಡು, ಕೋಳೂರು, ಬಳ್ಳಾರಿ, ಮೋಕಾ, ರೂಪನಗುಡಿ, ಕರೂರು, ತೆಕ್ಕಲಕೋಟೆ, ಸಿರುಗುಪ್ಪ, ಹಚ್ಚಳ್ಳಿ, ತೋರಣಗಲ್ಲು.ಈರುಳ್ಳಿ(ನೀರಾವರಿ): ಈರುಳ್ಳಿ(ನೀರಾವರಿ) ಬೆಳೆಯು ಒಳಪಡುವ ಹೋಬಳಿಗಳು ಸಂಡೂರು, ಚೋರನೂರು, ತೋರಣಗಲ್ಲು ಪ್ರದೇಶಗಳು ಒಳಪಡಲಿವೆ.

ವಿಮಾ ಕಂತು ಮತ್ತು ನೋಂದಣಿ ಅವಧಿ

ಕೆಂಪು ಮೆಣಸಿನಕಾಯಿ (ನೀ): ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ ರೂ.1,07,500 ಹಾಗೂ ಪ್ರತಿ ಹೆಕ್ಟೇರ್ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 5,375 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31.

ಈರುಳ್ಳಿ (ನೀ): ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ ರೂ.80,500 ಹಾಗೂ ಪ್ರತಿ ಹೆಕ್ಟೇರ್ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 4,025 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ ಅಥವಾ ಬಳ್ಳಾರಿ ಮತ್ತು ಕುರುಗೊಡು ತಾಲೂಕು ದೂ.08392-278177, ಮೊ.9480257282 ಹಾಗೂ ಸಂಡೂರು ದೂ.08395-260389, ಮೊ.9740934208 ಮತ್ತು ಸಿರುಗುಪ್ಪ ಮತ್ತು ಕಂಪ್ಲಿ ದೂ.08396-222066, ಮೊ.9448910277 ಗೆ ಸಂಪರ್ಕಿಸಿಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read