HomeLatest Newsವಿದ್ಯುತ್ ಗ್ರಾಹಕರಿಗೆ ಮುಖ್ಯ ಮಾಹಿತಿ: 5 ಅಡಿ ಎತ್ತರದಲ್ಲಿ ಮಾಪಕ ಅಳವಡಿಸಿಕೊಳ್ಳಲು ಸೂಚನೆ

ವಿದ್ಯುತ್ ಗ್ರಾಹಕರಿಗೆ ಮುಖ್ಯ ಮಾಹಿತಿ: 5 ಅಡಿ ಎತ್ತರದಲ್ಲಿ ಮಾಪಕ ಅಳವಡಿಸಿಕೊಳ್ಳಲು ಸೂಚನೆ

ಬಳ್ಳಾರಿ: ಬಳ್ಳಾರಿ ನಗರ ಉಪವಿಭಾಗ-1 ಜೆಸ್ಕಾಂ ವ್ಯಾಪ್ತಿಯಲ್ಲಿ ಕಂಪನಿಯ ನಿಯಮಾನುಸಾರ ಎಲ್ಲಾ ಸ್ಥಾವರದಲ್ಲಿರುವ ಮೀಟರ್‌ಗಳನ್ನು ಆಪ್ಟಿಕಲ್ ಪ್ರೋಬ್ ಡಿವೈಸ್ ಮೂಲಕವೇ ರೀಡಿಂಗ್ ಮಾಡಬೇಕಾಗಿದ್ದು, ವಿದ್ಯುತ್ ಗ್ರಾಹಕರು ತಮ್ಮ ಸ್ಥಾವರದ ವಿದ್ಯುತ್ ಮಾಪಕವನ್ನು ಕಡ್ಡಾಯವಾಗಿ ನೆಲದಿಂದ 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಬೇಕು.

ವಿದ್ಯುತ್ ಮಾಪಕಗಳು ಗೋಚರಿಸುವ ಹಾಗೂ ಓದಲು ಅನುಕೂಲವಾಗುವ ಸ್ಥಳದಲ್ಲಿ ಇರಬೇಕು. ಮೀಟರ್ ಓದುವವರಿಗೆ ಸ್ಥಳವಿಲ್ಲದಿದ್ದಲ್ಲಿ ಸ್ಥಳವಿರುವ ಜಾಗದಲ್ಲಿ ಇರಿಸಬೇಕು. ಅ.25 ರೊಳಗಾಗಿ ನಿಗದಿತ ಎತ್ತರದ ಜಾಗದಲ್ಲಿ ಅಳವಡಿಸಿಕೊಳ್ಳಬೇಕು.

ಈ ನಿಯಮ ಪಾಲನೆ ಮಾಡದಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular