
ಎರಡನೇ ಪಿಯುಸಿ / 12ನೇ ತರಗತಿಯ ಅಂಕಗಳನ್ನು ಸಲ್ಲಿಸಿದೆ ಇದ್ದ ಕಾರಣದಿಂದ ಸಿಇಟಿ- 2023 ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳು, ಎರಡನೇ ಪಿಯುಸಿ / 12ನೇ ತರಗತಿಯ ಅಂಕಗಳನ್ನು ಇಂಗ್ಲೀಷ್ ವಿಷಯವನ್ನೂ ಸೇರಿದಂತೆ ಎಲ್ಲಾ ವಿಷಯಗಳ ಅಂಕಗಳನ್ನು ದಿನಾಂಕ 19-06-2023 ಬೆಳಿಗ್ಗೆ 11.00ರೊಳಗಾಗಿ ಕೆಇಎ ಪೋರ್ಟಲ್ ನ ಲಿಂಕ್ ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಎರಡನೇ ಪಿಯುಸಿ / 12ನೇ ತರಗತಿಯಲ್ಲಿನ ಎಲ್ಲಾ ವಿಷಯಗಳ ಅಂಕಗಳನ್ನು ಹಾಗು ಒಟ್ಟು ಅಂಕಗಳನ್ನೂ ಸಹ ದಾಖಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.


