ಡೊನಾಲ್ಡ್ ಟ್ರಂಪ್ ಅವರ ನಿಜವಾದ ಮಗಳು ನಾನೇ ಎಂದ ಪಾಕ್‌ ಹುಡುಗಿ | Viral Video

ಸಾಮಾಜಿಕ ಜಾಲತಾಣಗಳಲ್ಲಿ ವಿಲಕ್ಷಣ ವಿಡಿಯೋ ಒಂದು ವೈರಲ್‌ ಆಗಿದ್ದು, ನೋಡುಗರಲ್ಲಿ ನಗೆ ಉಕ್ಕಿಸಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಯುವತಿಯೊಬ್ಬಳು ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ನಿಜವಾದ ಮಗಳು ನಾನೇ ಎಂದು ಹೇಳಿಕೊಂಡಿದ್ದಾಳೆ.

ಸಾಮಾಜಿಕ ಮಾಧ್ಯಮಗಳ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪಾಕಿಸ್ತಾನದ ಈ ಹುಡುಗಿ ತನ್ನ “ಅನನ್ಯ” ಕುಟುಂಬದ ಪರಂಪರೆಯನ್ನು ಉರ್ದುವಿನಲ್ಲಿ ಉತ್ಸಾಹದಿಂದ ವಿವರಿಸುವುದನ್ನು ಕಾಣಬಹುದು. ತಾನು ಮುಸ್ಲಿಂ ಮತ್ತು ಪಂಜಾಬಿ ಆಗಿರುವಾಗ, ತನ್ನ ತಂದೆ ಬೇರೆ ಯಾರೂ ಅಲ್ಲ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಪ್ರತಿಪಾದಿಸಿದ್ದಾಳೆ.

ಡೊನಾಲ್ಡ್ ಟ್ರಂಪ್ ಬುಧವಾರದಂದು ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಡೆಮಾಕ್ರಟಿಕ್ ಎದುರಾಳಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಎರಡನೇ ಬಾರಿಗೆ ಶ್ವೇತಭವನ ಪ್ರವೇಶಕ್ಕೆ ಸಜ್ಜಾಗುತ್ತಿರುವಾಗಲೇ ಈ ವಿಡಿಯೋ ವೈರಲ್‌ ಆಗಿದೆ..

“ನಾನು ಡೊನಾಲ್ಡ್ ಟ್ರಂಪ್ ಅವರ ಸ್ವಂತ ಮಗಳು” ಎಂದು ಈ ಹುಡುಗಿ ಅತೀವ ಆತ್ಮವಿಶ್ವಾಸದಿಂದ ಹೇಳಿದ್ದಾಳೆ. ನಾನು ಇಸ್ಲಾಂ ಧರ್ಮದ ಅನುಯಾಯಿ ಎಂದೂ ಸಹ ಹೇಳಿಕೊಂಡಿದ್ದಾಳೆ.

ಇದರ ಜೊತೆಗೆ ತನ್ನ ತಾಯಿ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಎಂದು ಹೇಳಿಕೊಂಡಿದ್ದು, “ನನ್ನ ತಾಯಿ ಇವಾನಾ, ಅವರು ನನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ, ನನ್ನ ತಂದೆ ಡೊನಾಲ್ಡ್ ಟ್ರಂಪ್, ತುಂಬಾ ಕಠಿಣ ಹಾಗೂ ಗಂಭೀರ ವ್ಯಕ್ತಿ, ಅವರು ಯಾವಾಗಲೂ ನನ್ನ ತಾಯಿಗೆ ನೀವು ಮಗಳನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಿದ್ದರು ”ಎಂದಿದ್ದಾಳೆ

ಆಕೆಗೆ ಈಗ ಏನು ಬೇಕು ಎಂದು ಸುದ್ದಿಗಾರರು ಕೇಳಿದಾಗ, “ನನ್ನ ತಂದೆಯನ್ನು ಭೇಟಿ ಮಾಡಲು ನಾನು ಮತ್ತೊಮ್ಮೆ ಹೋಗಬೇಕು” ಎಂದು ಹೇಳಿದ್ದಾಳೆ.

ಗಮನಾರ್ಹವಾಗಿ, ಡೊನಾಲ್ಡ್ ಟ್ರಂಪ್ ಅವರ ಮೊದಲ ಮದುವೆಯು ಜೆಕ್ ಕ್ರೀಡಾಪಟು ಮತ್ತು ರೂಪದರ್ಶಿ ಇವಾನಾ ಜೆಲ್ನಿಕೋವಾ ಅವರೊಂದಿಗೆ 1977 ರಲ್ಲಿ ನಡೆಯಿತು, ಆದರೆ ಅವರು 1990 ರಲ್ಲಿ ವಿಚ್ಛೇದನ ಪಡೆದರು. ದಂಪತಿಗೆ ಮೂರು ಮಕ್ಕಳಿದ್ದು, ಡೊನಾಲ್ಡ್ ಟ್ರಂಪ್ ಜೂನಿಯರ್, ಇವಾಂಕಾ ಟ್ರಂಪ್ ಮತ್ತು ಎರಿಕ್ ಟ್ರಂಪ್.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read