ಬೆಂಗಳೂರು ನಗರ ಜಿಲ್ಲೆ : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 6.26 ಕೋಟಿ ಅಂದಾಜು ಮೌಲ್ಯದ ಒಟ್ಟು 04ಎಕರೆ 0.15 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ಇಂದು ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸ್ಮಶಾನ, ಓಣಿದಾರಿ, ರಾಜಕಾಲುವೆ, ಕುಂಟೆ, ಖರಾಬು, ಸರ್ಕಾರಿ ಬಿ. ಖರಾಬು, ಸರ್ಕಾರಿ ಪಡ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
*ಬೆಂಗಳೂರು ಪೂರ್ವ ತಾಲ್ಲೂಕಿನ* ಕೆ.ಆರ್ ಪುರ ಹೋಬಳಿಯ ನಾಗೊಂಡನಹಳ್ಳಿ ಗ್ರಾಮದ ಸ.ನಂ 21 ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.04 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 1.00 ಕೋಟಿಗಳಾಗಿರುತ್ತದೆ.
*ಆನೇಕಲ್ ತಾಲ್ಲೂಕಿನ* ಕಸಬಾ ಹೋಬಳಿಯ ಬೆಸ್ತಮಾನಹಳ್ಳಿ ಗ್ರಾಮದ ಸ.ನಂ. 25,26,27,30,24,25 ರ ಮಧ್ಯದ ಜಾಗ, ಓಣಿ ದಾರಿ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ ಒಂದು ಎಕರೆಯಾಗಿದ್ದು, ಅಂದಾಜು ಮೌಲ್ಯ 80 ಲಕ್ಷಗಳಾಗಿರುತ್ತದೆ. ಅತ್ತಿಬೆಲೆ ಹೋಬಳಿಯ ಇಂಡ್ಲಬೆಲೆ ಗ್ರಾಮದ ಸ.ನಂ 128, 129, 130 ರಾಜಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.30 ಗುಂಟೆಯಾಗಿದ್ದು ಅಂದಾಜು ಮೌಲ್ಯ 60 ಲಕ್ಷಗಳಾಗಿರುತ್ತದೆ. ಅತ್ತಿಬೆಲೆ ಹೋಬಳಿಯ ಹೆಬ್ಬಗೋಡಿ ಗ್ರಾಮ ಸ.ನಂ 90 ರ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.28 ಗುಂಟೆಯಾಗಿದ್ದು, ಅಂದಾಜು ಮೌಲ್ಯ 90 ಲಕ್ಷಗಳಾಗಿರುತ್ತದೆ. ಸರ್ಜಾಪುರ ಹೋಬಳಿಯ ಚಿಕ್ಕನಾಗಮಂಗಲ ಗ್ರಾಮದ ಸ.ನಂ. 177 ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.00 ಕೋಟಿಗಳಾಗಿರುತ್ತದೆ.
*ಬೆಂಗಳೂರು ದಕ್ಷಿಣ ತಾಲ್ಲೂಕಿನ* ತಾವರಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸ.ನಂ 198ರ ಸರ್ಕಾರಿ ಬಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.23 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 46 ಲಕ್ಷಗಳಾಗಿರುತ್ತದೆ. ಬೇಗೂರು ಹೋಬಳಿಯ ಬೆಟ್ಟದಾಸನಪುರ ಗ್ರಾಮದ ಸ.ನಂ 16ರ ಸರ್ಕಾರಿ ಪಡ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ ಒಂದು ಎಕರೆಯಾಗಿದ್ದು, ಅಂದಾಜು ಮೌಲ್ಯ ರೂ 1.50 ಕೋಟಿಗಳಾಗಿರುತ್ತದೆ.ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾದ ಜಗದೀಶ್ ಕೆ ನಾಯಕ್, ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕರು, ತಾಲ್ಲೂಕಿನ ತಹಶೀಲ್ದಾರ್ ರವರುಗಳು ಉಪಸ್ಥಿತರಿದ್ದರು.

