HomeKarnatakaಅಕ್ರಮ ಬಾಂಗ್ಲಾದೇಶಿಗಳ ನುಸುಳುವಿಕೆ ರಾಷ್ಟ್ರೀಯ ಭದ್ರತೆಗೆ ಅಪಾಯ

ಅಕ್ರಮ ಬಾಂಗ್ಲಾದೇಶಿಗಳ ನುಸುಳುವಿಕೆ ರಾಷ್ಟ್ರೀಯ ಭದ್ರತೆಗೆ ಅಪಾಯ

ಕರ್ನಾಟಕದಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಬಾಂಗ್ಲಾದೇಶಿ  ನುಸುಳುವಿಕೆ ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯ. ಅಕ್ರಮ ಬಾಂಗ್ಲಾದೇಶಿಗಳ ಗಡಿಪಾರು ಅಗತ್ಯ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.

ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ ಈ ಕುರಿತು ಮಾತನಾಡಿ, ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಇದು ರಾಷ್ಟ್ರದ ಭದ್ರತೆ, ಕಾನೂನು–ಸುವ್ಯವಸ್ಥೆ ಮತ್ತು ಸಾಮಾಜಿಕ ಸಮತೋಲನಕ್ಕೆ ನೇರ ಸವಾಲಾಗಿದೆ ಎಂದು ಗಂಭೀರ ಎಚ್ಚರಿಕೆ ನೀಡಿದರು.

ಇತ್ತೀಚಿನ ಗುರುತಿನ ಅಭಿಯಾನದಲ್ಲಿ ಅನೇಕ ಅಕ್ರಮ ನುಸುಳುಗಾರರ ಬಳಿ ನಕಲಿ ಆಧಾರ್, ಪ್ಯಾನ್ ಹಾಗೂ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ. ಕೇವಲ ರೂ. 1,500ಕ್ಕೆ ಆಧಾರ್ ಕಾರ್ಡ್ ಸಿಗುತ್ತಿರುವುದು ದೇಶದ ಗುರುತಿನ ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವರ ಬಳಿ ಬಾಂಗ್ಲಾದೇಶ ಮತ್ತು ಭಾರತದ ಎರಡೂ ಮತದಾರರ ಗುರುತಿನ ಚೀಟಿಗಳು ಇರುವುದೂ ಬೆಳಕಿಗೆ ಬಂದಿದೆ. ಬೆಟ್ಟದಾಸನಪುರ, ಹುಲಿಮಂಗಲ, ಯಲಹಂಕ ಸೇರಿ ಹಲವೆಡೆ ಅಕ್ರಮ ವಸತಿಗಳು ಬೆಳೆಯುತ್ತಿದ್ದು, ಜನನ ಪ್ರಮಾಣಪತ್ರ, ಬ್ಯಾಂಕ್ ಖಾತೆ, ಸಾಲ ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ದೂರಿದರು.

ಎಕ್ಸ್‌ಪೈರ್ಡ್ ಗ್ಯಾಸ್ ಸಿಲಿಂಡರ್‌ಗಳ ಮರುಮಾರಾಟದಂತಹ ಜೀವಘಾತಕ ಅಕ್ರಮ ಚಟುವಟಿಕೆಗಳೂ ಪತ್ತೆಯಾಗಿವೆ. ಹುಲಿಮಂಗಲದಲ್ಲಿ ನಡೆದ ತೆರವು ಕಾರ್ಯಾಚರಣೆ ವೇಳೆ ಭಾರತ ಮಾತಾ ಕೀ ಜೈಗೆ ನಿರಾಕರಣೆ ಮಾಡಿ ಜೈ ಬಂಗ್ಲಾ ಘೋಷಣೆ ಕೂಗಿದ ಘಟನೆ ರಾಷ್ಟ್ರವಿರೋಧಿ ಮನೋಭಾವವನ್ನು ಬಹಿರಂಗಪಡಿಸಿದೆ ಎಂದರು.

ಹಿಂದಿನ ವರ್ಷಗಳಲ್ಲಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕರ ಬಂಧನಗಳು ನಡೆದಿರುವುದರಿಂದ ಈ ಸಮಸ್ಯೆಯ ಗಂಭೀರತೆ ಇನ್ನಷ್ಟು ಹೆಚ್ಚಾಗಿದೆ. ಪೊಲೀಸ್ ಹಾಗೂ ಆಡಳಿತದ ನಿರ್ಲಕ್ಷ್ಯದಿಂದ ನಕಲಿ ದಾಖಲೆ ತೋರಿಸಿ ಅಕ್ರಮ ನುಸುಳುಕೋರರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘಟನೆಗಳ ಒತ್ತಡದಿಂದ ಇತ್ತೀಚೆಗೆ ಹೆಬ್ಬಗೋಡಿ ಹಾಗೂ ಆನೇಕಲ್ ವ್ಯಾಪ್ತಿಯಲ್ಲಿ 33 ಅಕ್ರಮ ಬಾಂಗ್ಲಾದೇಶಿಗಳು ಬಂಧನ ಆಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಸುಮಾರು 20 ಲಕ್ಷ ಅಕ್ರಮ ಬಾಂಗ್ಲಾದೇಶಿಗಳು ವಾಸಿಸುತ್ತಿರುವ ಅಂದಾಜಿದೆ ಎಂದರು.

ಪ್ರಮುಖ ಬೇಡಿಕೆಗಳು 

  • ಅಕ್ರಮ ಬಾಂಗ್ಲಾದೇಶಿ ನುಸುಳುಗಾರರ ವಿರುದ್ಧ ವಿಶೇಷ ತನಿಖಾ ಅಭಿಯಾನ ತಕ್ಷಣ ಆರಂಭಿಸಿ, ದೇಶದ್ರೋಹದ ಆರೋಪ ದಾಖಲಿಸಬೇಕು.
  • ನಕಲಿ ದಾಖಲೆ ತಯಾರಿಸುವ ಜಾಲವನ್ನು ಬೇರು ಸಮೇತ ನಾಶಪಡಿಸಬೇಕು.
  • ಎಲ್ಲಾ ಅಕ್ರಮ ಬಾಂಗ್ಲಾದೇಶಿಗಳನ್ನು ಗುರುತಿಸಿ ತಕ್ಷಣವೇ ಡಿಪೋರ್ಟ್ ಮಾಡಬೇಕು.
  • ಅವರಿಗೆ ಬೆಂಬಲ ನೀಡುವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
  • UNHCR ಕಾರ್ಡ್ ದುರುಪಯೋಗ ಕುರಿತು ಕೇಂದ್ರ ಸರ್ಕಾರ ತಕ್ಷಣ ಹಸ್ತಕ್ಷೇಪ ಮಾಡಬೇಕು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular