HomeLatest Newsಗಾಯಕಿ ಎಸ್.ಜಾನಕಿ ನಿಧನದಿಂದ ಆಘಾತವಾಗಿದೆ: ಲಂಡನ್ ನಿಂದ ಸಾಂತಾಪ ಸೂಚಿಸಿದ ಇಳಯರಾಜ

ಗಾಯಕಿ ಎಸ್.ಜಾನಕಿ ನಿಧನದಿಂದ ಆಘಾತವಾಗಿದೆ: ಲಂಡನ್ ನಿಂದ ಸಾಂತಾಪ ಸೂಚಿಸಿದ ಇಳಯರಾಜ

ಬೆಂಗಳೂರು: ಗಾನಕೋಗಿಲೆ, ಹಿರಿಯ ಗಾಯಕಿ ಎಸ್​. ಜಾನಕಿ ಅವರ ನಿಧನಕ್ಕೆ ಸಂಗೀತ ನಿರ್ದೇಶಕ ಇಳಯರಾಜ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಲಂಡನ್‌ನಿಂದ ವೀಡಿಯೊ ಮೂಲಕ ಇಳಯರಾಜ್, ಜಾನಕಿ ಅಮ್ಮ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖ ಮತ್ತು ಆಘಾತವಾಗಿದೆ ಎಂದು ಕಾಂಬನಿ ಮಿಡಿದಿದ್ದಾರೆ. ಜೀವನದಲ್ಲಿ ಅಸಹನೀಯ ದುಃಖಗಳನ್ನು, ಸಹಿಸಲಾಗದ ಘಟನೆಗಳನ್ನು ಸಹಿಸಿಕೊಂಡು ಅವರು ಬದುಕಿದರು ಎಂಬುದು ಅತ್ಯಂತ ವೇದನೆಯ ವಿಷಯ ಎಂದು ಇಳಯರಾಜ್ ಸ್ಮರಿಸಿದ್ದಾರೆ.

ತಮ್ಮ ಪ್ರತಿಭೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಜಾನಕಿ ಅಮ್ಮ ತಮ್ಮ ಪ್ರತಿಯೊಂದು ಹಾಡಿನಲ್ಲೂ ನಿರೂಪಿಸುತ್ತಲೇ ಬಂದಿದ್ದಾರೆ. ಅವರು ಅತ್ಯಂತ ಕಠಿಣ ಪರಿಶ್ರಮಿ. ಜಾನಕಿ ಅವರ ಅಗಲಿಕೆ ಭಾರತೀಯ ಚಲನಚಿತ್ರ ಸಂಗೀತ ಲೋಕಕ್ಕೆ ಒಂದು ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋದಾಗಿ ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular