ಬೇಟೆಯಾಡುವಾಗ ಚಿರತೆ ಹಿಂಗಾಲುಗಳ ಮೇಲೆ ನಿಂತಿರುವುದನ್ನು ತೋರಿಸುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ, ಚಿರತೆ ತನ್ನ ಹಿಂಗಾಲುಗಳ ಮೇಲೆ ನೇರವಾಗಿ ನಿಂತಿರುವುದನ್ನು ಕಾಣಬಹುದು, ಇದು ಅಸಾಮಾನ್ಯ ಭಂಗಿಯಾಗಿದೆ. ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದ ವೀಡಿಯೊ ಇದಾಗಿದೆ. ಕಸ್ವಾನ್ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳುವ ಮೊದಲು, ಇದನ್ನು ‘ಇತ್ತೀಚಿನ ದೃಶ್ಯಗಳು – ಕ್ರುಗರ್’ ಎಂಬ ಫೇಸ್‌ಬುಕ್ ಪುಟದಲ್ಲಿಯೂ ಹಂಚಿಕೊಳ್ಳಲಾಗಿದೆ.
ಈ ಚಿರತೆ ಹೊಂಚು ಹಾಕುತ್ತಿರುವಾಗ, ಉತ್ತಮ ನೋಟವನ್ನು ಪಡೆಯಲು ಇದ್ದಕ್ಕಿದ್ದಂತೆ ತನ್ನ ಹಿಂಗಾಲುಗಳ ಮೇಲೆ ಕುಳಿತುಕೊಂಡಿದೆ. ನಂತರ, ಇನ್ನೂ ಉತ್ತಮ ನೋಟಕ್ಕಾಗಿ ಮನುಷ್ಯನಂತೆ ಹಿಂಭಾಗದ ಕಾಲುಗಳ ಮೇಲೆ ಸಂಪೂರ್ಣವಾಗಿ ನೇರವಾಗಿ ನಿಂತಿದೆ.
ಆ ಚಿರತೆ ಎರಡು ಕಾಲುಗಳ ಮೇಲೆ ನಿಂತು ತನ್ನ ಆಹಾರವನ್ನು ನೋಡುತ್ತಿದೆ. ಚಿರತೆಗಳು ಭೂಮಿಯ ಮೇಲಿನ ಅತ್ಯಂತ ಬಹುಮುಖ ಜೀವಿಗಳಲ್ಲಿ ಒಂದಾಗಿದೆ ಎಂದು ಕಸ್ವಾನ್ ಪೋಸ್ಟ್ ಹಾಕಿದ್ದಾರೆ.
ವೀಡಿಯೊ ಪೋಸ್ಟ್ ಮಾಡಿದ ನಂತರ ಸುಮಾರು 200.2 K ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
That leopard is looking at his food by standing on two legs. Leopards are one of the most versatile creatures on earth. From Kruger. pic.twitter.com/tNG74rt9R8
— Parveen Kaswan, IFS (@ParveenKaswan) July 12, 2025