ಜಿಂಕೆಗೆ ವೈದ್ಯಕೀಯ ನೆರವು ನೀಡುತ್ತಿರುವ ವ್ಯಕ್ತಿಯ ಚಿತ್ರ ಶೇರ್‌ ಮಾಡಿದ ಐಎಫ್‌ಎಸ್ ಅಧಿಕಾರಿ

ಕರುಣಾಮಯಿ ಜನರಿಲ್ಲದೇ ಭೂಮಿ ಮೇಲಿನ ಬದುಕನ್ನು ಊಹಿಸುವದೂ ಅಸಾಧ್ಯ. ಸಾಮಾಜಿಕ ಜಾಲತಾಣದಲ್ಲಿ ಕರುಣಾಮಯಿ ಮಂದಿ ಇತರರಿಗೆ ಮಾಡುವ ಸಹಾಯದ ವಿಡಿಯೋಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ.

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವನ್ ಇಂಥದ್ದೊಂದು ಪೋಸ್ಟ್ ಶೇರ್‌ ಮಾಡಿದ್ದಾರೆ. ಗಾಯಗೊಂಡಿರುವ ಜಿಂಕೆ ಮರಿಯೊಂದಕ್ಕೆ ವೈದ್ಯಕೀಯ ನೆರವು ನೀಡುತ್ತಿರುವ ವ್ಯಕ್ತಿಯೊಬ್ಬರ ಚಿತ್ರವನ್ನು ಪ್ರವೀಣ್ ಶೇರ್‌ ಮಾಡಿದ್ದಾರೆ. ಜಿಂಕೆ ಮರಿಗೆ ಆಕ್ಸಿಜನ್ ಮಾಸ್ಕ್ ಹಾಕಿ, ಅದಕ್ಕೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿರುವ ಈತ ತನ್ನ ಕೈಯಲ್ಲಿ ಆಮ್ಲಜನಕದ ಸಿಲಿಂಡರ್‌ ಹಿಡಿದಿರುವುದನ್ನು ಇಲ್ಲಿ ನೋಡಬಹುದಾಗಿದೆ.

“ನೀವು ಏನು ಬೇಕಾದರೂ ಆಗಬಹುದಾದ ಈ ಜಗತ್ತಿನಲ್ಲಿ, ಎಲ್ಲರಿಗೂ ಕರುಣಾಮಯಿಯಾಗಿರಿ,” ಎಂದು ಕಸ್ವನ್ ಈ ಚಿತ್ರಕ್ಕೆ ಕ್ಯಾಪ್ಷನ್ ಕೊಟ್ಟು ಶೇರ್‌ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read