HomeHealthಬೆನ್ನು ನೋವಿನ ಸಮಸ್ಯೆ ಇರೋರು ಇದನ್ನೊಮ್ಮೆ ಟ್ರೈ ಮಾಡಿ...!

ಬೆನ್ನು ನೋವಿನ ಸಮಸ್ಯೆ ಇರೋರು ಇದನ್ನೊಮ್ಮೆ ಟ್ರೈ ಮಾಡಿ…!

ಈಗಿನ ಜೀವನಶೈಲಿ, ವರ್ಕ್​ ಲೋಡ್​ ಇವೆಲ್ಲದರಿಂದ ಬೆನ್ನು ನೋವು ಸಮಸ್ಯೆ ಅನ್ನೋದು ಚಿಕ್ಕ ವಯಸಲ್ಲೇ ಬಂದುಬಿಡುತ್ತೆ. ತಾಸುಗಟ್ಟಲೇ ಕಂಪ್ಯೂಟರ್​ ಮುಂದೆ ಕೂರುವವರು, ಅಡುಗೆ ಮನೆಯಲ್ಲಿ ನಿಂತುಕೊಂಡೇ ಕೆಲಸ ಮಾಡೋದು, ಹೈ ಹೀಲ್ಡ್ ಚಪ್ಪಲಿ ಹೀಗೆ ನಾನಾ ಕಾರಣಗಳು ಬೆನ್ನು ನೋವು ಸಮಸ್ಯೆ ಬರೋಕೆ ಮುಖ್ಯ ಕಾರಣ.

ಆದರೆ ಈ ಸಮಸ್ಯೆಗೆ ಮನೆ ಮದ್ದಿನ ಮೂಲಕವೇ ನೀವು ಪರಿಹಾರ ಕಂಡುಕೊಳ್ಳಬಹುದು. ಅರ್ಧ ಚಮಚ ಅರಿಶಿಣ ಪುಡಿಗೆ ಅರ್ಧ ಚಮಚ ಶುಂಠಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನ ನೀರಿನಲ್ಲಿ ಹಾಕಿ 10ರಿಂದ 15 ನಿಮಿಷ ಮೀಡಿಯಮ್​ ಫ್ಲೇಮ್​ನಲ್ಲಿ ಕಾಯಿಸಿ. ಅದು ತಣ್ಣಗಾದ ಬಳಿಕ ಇದಕ್ಕೆ ಜೇನುತುಪ್ಪ ಹಾಕಿ ದಿನಕ್ಕೆರಡು ಬಾರಿ ಕುಡಿಯಿರಿ. ಈ ರೀತಿ ಮಾಡೋದ್ರಿಂದ ನೋವು ಕಡಿಮೆಯಾಗುತ್ತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಗ್ರಾಂ ಔಡಲ ಕಾಯಿ ಎಲೆಯನ್ನ ರುಬ್ಬಿಕೊಂಡು ಆ ಪುಡಿಯನ್ನ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಆಯೋಡಿನ್​ ಉಪ್ಪನ್ನೂ ಮಿಕ್ಸ್ ಮಾಡಿ. ಬಳಿಕ ಬೆನ್ನಿಗೆ ಮಸಾಜ್​ ಮಾಡಿ. ಇದಾದ ಬಳಿಕ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular