ಸಂಕೋಚವಿಲ್ಲದೆ ಈ ವಸ್ತುಗಳನ್ನು ಪಡೆದ್ರೆ ಜೀವನದಲ್ಲಿ ಉನ್ನತಿ ಸಾಧ್ಯ

ಪರರ ವಸ್ತುಗಳಿಗೆ ಆಸೆ ಪಡಬಾರದು ಎನ್ನುತ್ತಾರೆ ಹಿರಿಯರು. ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಯಾವುದೇ ಸಂಕೋಚವಿಲ್ಲದೆ, ಎಲ್ಲಿಯಾದ್ರೂ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಮನು ಸ್ಮೃತಿಯ ಶ್ಲೋಕವೊಂದರಲ್ಲಿ 7 ವಸ್ತುಗಳನ್ನು ಉಲ್ಲೇಖ ಮಾಡಲಾಗಿದೆ. ಆ ವಸ್ತುಗಳನ್ನು ಎಲ್ಲಿ, ಯಾರಿಂದ, ಯಾವಾಗಲಾದ್ರೂ ಸಂಕೋಚವಿಲ್ಲದೆ ಪಡೆಯಬೇಕಂತೆ.

ದುಬಾರಿ ರತ್ನ: ವಜ್ರ, ನೀಲಂ, ಪನ್ನಾ ಸೇರಿದಂತೆ ರತ್ನಗಳು ದುಬಾರಿಯಾಗಿರುತ್ತವೆ. ಸಮುದ್ರ ತೀರ ಹಾಗೂ ಗಣಿ ಪ್ರದೇಶ ಸ್ವಚ್ಛವಾಗಿರುವುದಿಲ್ಲ. ಆದ್ರೆ ಅಲ್ಲಿ ಸಿಗುವ ಈ ವಸ್ತುಗಳನ್ನು ಧರಿಸುವುದು ಬಹಳ ಒಳ್ಳೆಯದು. ಇವು ನಿಮಗೆ ಲಾಭ ತಂದುಕೊಡುತ್ತವೆ.

ಶಿಕ್ಷಣ : ವಿದ್ಯೆ ಎಲ್ಲಿಯಾದ್ರೂ, ಯಾರಿಂದ ಸಿಕ್ಕಿದ್ರೂ ಸಂಕೋಚವಿಲ್ಲದೆ ಪಡೆಯಿರಿ. ಪ್ರತಿಯೊಂದರ ಬಗ್ಗೆ ಜ್ಞಾನವಿದ್ದಾಗ ಮಾತ್ರ ಯಶಸ್ಸು ಸಾಧ್ಯ. ಜೀವನದ ಸಮಸ್ಯೆಯಿಂದ ಹೊರ ಬರಲು ವಿದ್ಯೆ ಬಹಳ ಮುಖ್ಯ.

ಧರ್ಮ : ಧರ್ಮದ ಅರ್ಥವೇ ಧಾರಣೆ ಮಾಡುವುದು. ಧರ್ಮ ಒಂದು ಶಬ್ಧವಲ್ಲ. ಇಡೀ ಜೀವನವನ್ನು ನಡೆಸುವ ಶಕ್ತಿ ಅದಕ್ಕಿದೆ. ಧರ್ಮ ನಮ್ಮನ್ನು ಸರಿ ಮಾರ್ಗದಲ್ಲಿ ನಡೆಸುವ ಜೊತೆಗೆ ವಾಸ್ತವಿಕ ಜವಾಬ್ದಾರಿ ಬಗ್ಗೆ ತಿಳುವಳಿಕೆ ನೀಡುತ್ತದೆ.

ಪವಿತ್ರತೆ : ಇದು ಕೇವಲ ಶರೀರಕ್ಕೆ ಸಂಬಂಧಿಸಿದ್ದಲ್ಲ. ಆಚಾರ-ವಿಚಾರ ಜೀವನ ವ್ಯವಹಾರಕ್ಕೆ ಸಂಬಂಧಿಸಿದ್ದು. ವ್ಯಕ್ತಿಯ ಚರಿತ್ರೆ, ವ್ಯವಹಾರದಲ್ಲಿ ಬದಲಾವಣೆಯಾದಾಗ ಮಾತ್ರ ಜೀವನದಲ್ಲಿ ಉನ್ನತಿ ಸಾಧ್ಯ.

ಉಪದೇಶ: ಪವಿತ್ರ ಸ್ಥಳದಲ್ಲಿ ಜ್ಞಾನಿಯೊಬ್ಬರು ನಿಮಗೆ ಉಪದೇಶ ಮಾಡುತ್ತಿದ್ದರೆ ಅದನ್ನು ಕೇಳದೆ ಹಾಗೆ ಬರಬೇಡಿ. ಯಾವ ವ್ಯಕ್ತಿಯ ಯಾವ ಉಪದೇಶ ನಮ್ಮ ಜೀವನದಲ್ಲಿ ಬದಲಾವಣೆ ತರುತ್ತೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರ ಮಾತನ್ನು ಆಲಿಸಬೇಕು.

ಕಲೆ : ಕಲೆ ಕೂಡ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಲೆಯನ್ನು ಹೇಳಿಕೊಡುವ ವ್ಯಕ್ತಿಯನ್ನು ಗೌರವಿಸಬೇಕು. ಕಲೆ ಯಾವುದೇ ಆಗಿರಲಿ, ಸರಿಯಾಗಿ ಕಲಿತಲ್ಲಿ ನಿಮ್ಮ ಹಾಗೂ ಕುಟುಂಬ ನಿರ್ವಹಣೆಗೆ ಇದು ನೆರವಾಗಲಿದೆ.

ಗುಣವಂತ ಮಹಿಳೆ : ಸೌಂದರ್ಯಕ್ಕಿಂತ ಗುಣಕ್ಕೆ ಹೆಚ್ಚಿನ ಬೆಲೆ. ಕುಟುಂಬಸ್ಥರ ಬಗ್ಗೆ ಚಿಂತೆ ಮಾಡುವ, ಮನೆ, ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ, ಪತಿಯ ಬೆಂಬಲಕ್ಕೆ ಸದಾ ಇರುವ ಮಹಿಳೆ ಸೌಭಾಗ್ಯಶಾಲಿಯಾಗಿರುತ್ತಾಳೆ. ಅಂತ ಸ್ತ್ರೀಯಲ್ಲಿ ಸೌಂದರ್ಯ ಹುಡುಕುವುದು ಮೂರ್ಖತನ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read