HomeAstroಪ್ರತಿ ದಿನ ಈ ಟೀ ಕುಡಿದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಪ್ರತಿ ದಿನ ಈ ಟೀ ಕುಡಿದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಪ್ರತಿ ದಿನ ಟೀ ಕುಡಿದೇ ಅನೇಕರು ದಿನವನ್ನು ಆರಂಭಿಸ್ತಾರೆ. ಟೀ ವ್ಯಕ್ತಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಟೀಗೆ ನಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿ ಇದೆ. ಎಲ್ಲ ದಿನ ಒಂದೇ ರೀತಿಯ ಟೀ ಕುಡಿಯುವುದು ಒಳ್ಳೆಯದಲ್ಲ. ಶಾಸ್ತ್ರದ ಪ್ರಕಾರ ಟೀ ಕುಡಿದಲ್ಲಿ ನಮ್ಮ ಅದೃಷ್ಟ ಬದಲಾಗಲಿದೆ.

ಭಾನುವಾರ ಕಾಕಂಬಿಯ ಟೀ ಸೇವನೆ ಮಾಡಬೇಕು. ಯಾವುದೇ ಕಾರಣಕ್ಕೂ ಶುಂಠಿ ಟೀಯನ್ನು ಭಾನುವಾರ ಸೇವನೆ ಮಾಡಬಾರದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಮವಾರ ಟೀಗೆ ಕಲ್ಲುಸಕ್ಕರೆಯನ್ನು ಹಾಕಿ ಸೇವನೆ ಮಾಡಬೇಕು. ಇದ್ರಿಂದ ಚಂದ್ರನ ಶುಭ ಪ್ರಭಾವ ನಮ್ಮ ಮೇಲೆ ಬೀಳುತ್ತದೆ.

ಮಂಗಳವಾರ ಕಾಕಂಬಿ ಹಾಗೂ ಲವಂಗ ಬೆರೆಸಿದ ಟೀ ಕುಡಿಯಿರಿ.

ಬುಧವಾರ ತುಳಸಿ ಟೀ ಕುಡಿಯಿರಿ. ತುಳಸಿ ಟೀ ಸೇವನೆ ಮಾಡುವುದರಿಂದ ಬುಧನ ಪ್ರಭಾವ ಹೆಚ್ಚಾಗುತ್ತದೆ.

ಗುರುವಾರ ಜೇನುತುಪ್ಪದ ಟೀ ಸೇವನೆ ಮಾಡಿ. ಟೀಗೆ ಸ್ವಲ್ಪ ಕೇಸರಿ ಬೆರೆಸಿ ಕುಡಿಯುವುದನ್ನೂ ಶುಭವೆಂದು ಪರಿಗಣಿಸಲಾಗಿದೆ.

ಶುಕ್ರವಾರ ಸಕ್ಕರೆ ಬೆರೆಸಿದ ಟೀ ಸೇವಿಸಿ. ಇದ್ರಿಂದ ಶುಕ್ರ ಗ್ರಹ ಬಲಿಷ್ಠವಾಗುತ್ತದೆ. ನಿಂಬೆ ಟೀಯನ್ನು ಕೂಡ ಶುಕ್ರವಾರ ಸೇವನೆ ಮಾಡಬಹುದು.

ಶನಿವಾರ ಕಾಳು ಮೆಣಸು ಹಾಗೂ ನಿಂಬೆ ಬೆರೆಸಿದ ಟೀ ಕುಡಿಯಿರಿ. ಹಾಲು ಬೆರೆಸದ ಟೀಯನ್ನು ಶನಿವಾರ ಕುಡಿಯುವುದು ಬಹಳ ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular