ಉಪಹಾರ ಸೇವಿಸದಿದ್ದರೆ ಕಾಡುತ್ತದೆ ಕೂದಲಿನ ಸಮಸ್ಯೆ

ಕೆಲವರು ತೂಕವನ್ನು ಇಳಿಸಲು ಬೆಳಗ್ಗಿನ ಉಪಹಾರವನ್ನು ಸೇವಿಸುವುದಿಲ್ಲ. ಆದರೆ ನೀವು ಎಷ್ಟೇ ಶಕ್ತಿಯುತವಾಗಿದ್ದರೂ ಎಂದಿಗೂ ಉಪಹಾರವನ್ನು ಸೇವಿಸುವುದನ್ನು ತಪ್ಪಿಸಬೇಡಿ. ಇಲ್ಲವಾದರೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೀರಿ. ಹಾಗಾದ್ರೆ ಬೆಳಿಗ್ಗೆ ಉಪಹಾರ ಸೇವಿಸದಿದ್ದರೆ ಯಾವೆಲ್ಲಾ ಸಮಸ್ಯೆಗಳು ಕಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಉಪಹಾರವನ್ನು ಸೇವಿಸದಿದ್ದರೆ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

*ಬೆಳಿಗ್ಗಿನ ಉಪಹಾರವನ್ನು ಸೇವಿಸದಿದ್ದರೆ ಟೈಪ್ 2 ಮಧುಮೇಹ ಕಾಯಿಲೆ ಕಾಡಬಹುದು ಎಂದು ಅಧ್ಯಯನದಿಂದ ಸಾಬೀತಾಗಿದೆ.

*ಮುಖ್ಯವಾಗಿ ಕೂದಲಿನ ಆರೋಗ್ಯ ಕಾಪಾಡಲು ಬಯಸುವವರು ಅಪ್ಪಿತಪ್ಪಿಯೂ ಬೆಳಿಗ್ಗಿನ ಉಪಹಾರ ಸೇವಿಸುವುದನ್ನು ಮರೆಯಬೇಡಿ. ಯಾಕೆಂದರೆ ಬೆಳಿಗ್ಗೆ ಉಪಹಾರ ಸೇವಿಸದಿದ್ದರೆ ದೇಹದಲ್ಲಿ ಪ್ರೋಟೀನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಕೂದಲಿನ ಬೆಳೆವಣೆಗೆಯ ಮೇಲೆ ಪರಿಣಾಮ ಬೀರಿ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಕೊನೆಗೆ ಬೋಳು ತಲೆಯ ಸಮಸ್ಯೆ ಕಾಡಬಹುದು. ಹಾಗಾಗಿ ಬೆಳಿಗ್ಗಿನ ಉಪಹಾರವನ್ನು ಪ್ರೋಟೀನ್ ನೊಂದಿಗೆ ಸೇವಿಸುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read