ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸದಿದ್ದರೆ ಗರ್ಭಿಣಿ ಆರೋಗ್ಯಕ್ಕೆ ಉತ್ತಮ

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ್ಣ, ರಂಜಕ, ಮೆಗ್ನೀಶಿಯಂ, ಹಲವಾರು ವಿಟಮಿನ್ ಗಳನ್ನು ಒಳಗೊಂಡಿರುತ್ತದೆ. ಆದರೆ ಈ ಹಾಗಲಕಾಯಿಯನ್ನು ಗರ್ಭಿಣಿಯರು ಮಾತ್ರ ಸೇವಿಸಬಾರದು. ಇದಕ್ಕೆ ಕಾರಣ ಇಲ್ಲಿದೆ ನೋಡಿ.

*ಹಾಗಲಕಾಯಿಯಲ್ಲಿರುವ ಪೋಷಕಾಂಶ ದೇಹಕ್ಕೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳನ್ನು ನಾಶ ಮಾಡುತ್ತದೆ. ಇದರಿಂದ ರಕ್ತಹೀನತೆ ಸಮಸ್ಯೆ ಕಾಡಬಹುದು. ಇದನ್ನು ಗರ್ಭಿಣಿಯರು ಸೇವಿಸಿದರೆ ಮಗುವಿನ ಜೀವಕ್ಕೆ ಅಪಾಯ ಸಂಭವಿಸಬಹುದು.

*ಹಾಗಲಕಾಯಿಯಲ್ಲಿರುವ ಅಣುಗಳು ದೇಹ ಸೇರಿದಾಗ ವಿಷವಾಗಿ ಪರಿಣಮಿಸುತ್ತದೆ. ಇದನ್ನು ಗರ್ಭಿಣಿಯರು ಸೇವಿದರೆ ಕರುಳಿನ ನೋವು, ವಾಂತಿ, ದಣಿವು, ಸ್ನಾಯುವಿನ ಸೆಳೆತ, ವಾಕರಿಕೆ ಮತ್ತು ಲಾಲಾರಸದ ಅಧಿಕ ಉತ್ಪಾದನೆಗೆ ಕಾರಣವಾಗಬಹುದು.

*ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸಿದರೆ ಅದರ ಬೀಜಗಳು ಹೊಟ್ಟೆ ಸೇರಿದಾಗ ಅಜೀರ್ಣ, ಅತಿಸಾರ, ಹೊಟ್ಟೆ ನೋವು ಉಂಟಾಗುತ್ತದೆ.

* ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸಿದರೆ ಗರ್ಭಕೋಶ ಸಂಕುಚನಗೊಂಡು ರಕ್ತಸ್ರಾವವಾಗಬಹುದು. ಇದರಿಂದ ಗರ್ಭಪಾತ ಕೂಡ ಸಂಭವಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read