HomeBeautyಒದ್ದೆ ಕೂದಲಿನಲ್ಲಿ ಈ ತಪ್ಪು ಮಾಡಿದ್ರೆ ಹೆಚ್ಚಾಗುತ್ತೆ ಹೇರ್‌ ಫಾಲ್‌ ಸಮಸ್ಯೆ

ಒದ್ದೆ ಕೂದಲಿನಲ್ಲಿ ಈ ತಪ್ಪು ಮಾಡಿದ್ರೆ ಹೆಚ್ಚಾಗುತ್ತೆ ಹೇರ್‌ ಫಾಲ್‌ ಸಮಸ್ಯೆ

ದಟ್ಟವಾದ ಹಾಗೂ ಆರೋಗ್ಯಕ ಕೂದಲು ಎಲ್ಲರ ಕನಸು. ಕೂದಲ ಸೌಂದರ್ಯಕ್ಕಾಗಿ ಏನೆಲ್ಲ ಮಾಡ್ತಾರೆ. ಆದ್ರೆ ಒದ್ದೆ ಕೂದಲಿನ ಜೊತೆ ನಾವು ನಡೆದುಕೊಳ್ಳುವ ರೀತಿಯಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಒದ್ದೆ ಕೂದಲನ್ನು ಕಟ್ಟುವ ಜೊತೆಗೆ ಅನೇಕ ತಪ್ಪುಗಳನ್ನು ಮಹಿಳೆಯರು ಮಾಡ್ತಾರೆ. ಈ ಕಾರಣಗಳಿಂದಾಗಿ ಕೂದಲಿನ ಆರೋಗ್ಯ ಹಾಳಾಗುತ್ತದೆ.

ಸ್ನಾನ ಮಾಡಿದ ನಂತ್ರ ಅನೇಕ ಮಹಿಳೆಯರು ಟವೆಲ್ ನಲ್ಲಿ ಒದ್ದೆ ಕೂದಲನ್ನು ಉಜ್ಜುತ್ತಾರೆ. ಇದ್ರಿಂದ ಕೂದಲು ದುರ್ಬಲಗೊಳ್ಳುತ್ತದೆ. ಹಾಗಾಗಿ ಕೂದಲಿನ ಮೇಲೆ ಟವೆಲ್ ಇಟ್ಟು ನಿಧಾನವಾಗಿ ಒತ್ತಬೇಕು. ಉಜ್ಜಬಾರದು.

ಕಚೇರಿಗೆ ಹೋಗುವ ಆತುರದಲ್ಲಿ ಮಹಿಳೆಯರು ಒದ್ದೆ ಕೂದನ್ನು ಬಾಚಿಕೊಳ್ತಾರೆ. ಇದ್ರಿಂದ ಕೂದಲು ದುರ್ಬಲವಾಗಿ ಉದುರಲು ಶುರುವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒದ್ದೆ ಕೂದಲನ್ನು ಡ್ರೈ ಮಾಡುವುದು ಕೂಡ ಹಾನಿಕಾರಕ. ಕೂದಲಿಗೆ ಶಾಖ ಬೀಳುವುದ್ರಿಂದ ಕೂದಲಿನ ಬುಡ ದುರ್ಬಲವಾಗುತ್ತದೆ.

ಕೆಲ ಮಹಿಳೆಯರು ಒದ್ದೆ ಕೂದಲನ್ನು ಬಿಗಿಯಾಗಿ ಕಟ್ತಾರೆ. ಇದ್ರಿಂದ ಕೂದಲು ಉದುರಲು ಶುರುವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular