
ಅರೋವಾನಾ ಮೀನುಗಳು ಮನೆಗೆ ಉತ್ತಮ ಆರೋಗ್ಯ, ಸಂತೋಷ, ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತವಾಗಿದೆ. ಈ ಮೀನುಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನ ತೊಡೆದು ಹಾಕುತ್ತವೆಯಂತೆ. ನಿಮಗೆ ಮನೆಯಲ್ಲಿ ಮೀನುಗಳನ್ನ ಸಾಕೋದು ಕಷ್ಟ ಎಂತಾದ್ರೆ ವಾಸ್ತು ಶಾಸ್ತ್ರದಲ್ಲಿ ಇದಕ್ಕೂ ಪರಿಹಾರವಿದೆ.
ಅಕ್ವೇರಿಯಂನಲ್ಲಿ ಸಜೀವ ಮೀನನ್ನ ಸಾಕುವ ಬದಲು ಚಿನ್ನದಲ್ಲಿ ಅರೋವಾನಾ ಮೀನಿನ ಪುಟ್ಟ ಪ್ರತಿಮೆ ನಿರ್ಮಿಸಿ ಅದರ ಬಾಯಿಯಲ್ಲಿ ನಾಣ್ಯವನ್ನಿರಿಸಿ ಮನೆಯಲ್ಲಿ ಇಡಬಹುದು. ಈ ಪ್ರತಿಮೆಯನ್ನ ನೀವು ಮನೆಯ ಈಶಾನ್ಯ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಇರಿಸಬಹುದು. ಕೆಲವು ಪ್ರಾಣಿಶಾಸ್ತ್ರಜ್ಞರು ಅರೋವಾನಾ ಮೀನು ಭೂಕಂಪದ ಬಗ್ಗೆ ಪೂರ್ವ ಮಾಹಿತಿಯನ್ನೂ ನೀಡುತ್ತವೆ ಎಂದು ಹೇಳುತ್ತಾರೆ.

